Connect with us

    LATEST NEWS

    ಪಡುಬಿದ್ರೆ-ಕಾರ್ಕಳ ಟೋಲ್ ನಿರ್ಮಾಣದ ವಿರುದ್ಧ ಪ್ರತಿಭಟನೆಗೆ ಬಸ್ ಮಾಲಕರ ಸಂಘದ ಬೆಂಬಲ

    ಮಂಗಳೂರು, ಆಗಸ್ಟ್ 20: ಪಡುಬಿದ್ರೆ-ಕಾರ್ಕಳ ಹೆದ್ದಾರಿಯಲ್ಲಿ ಕಂಚಿನಡ್ಕ ಬಳಿ ಟೋಲ್ ನಿರ್ಮಾಣ ಮಾಡಲು ಮುಂದಾಗಿರುವ ಕ್ರಮವನ್ನು ಕೆನರಾ ಬಸ್ ಮಾಲಕರ ಅಸೋಸಿಯೇಷನ್ ಖಂಡಿಸುತ್ತಿದ್ದು ಇದರ ವಿರುದ್ಧ ಯಾವುದೇ ರೀತಿಯ ಪ್ರತಿಭಟನೆಗೆ ಸಂಘಟನೆ ಸಿದ್ಧವಾಗಿದೆ“ ಎಂದು ಸಂಘಟನೆಯ ಕಾರ್ಯದರ್ಶಿ ಸುದೇಶ್ ಮರೋಳಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

    ಕೇಂದ್ರ ಸರಕಾರದ ನಿಯಮಗಳ ಅನ್ವಯ ಹೆದ್ದಾರಿಯಲ್ಲಿ 60 ಕಿಮೀ ಅಂತರದಲ್ಲಿ ಟೋಲ್ ಗೇಟ್ ನಿರ್ಮಾಣ ಮಾಡಲು ಅವಕಾಶವಿಲ್ಲ. ಆದರೆ ಹೆಜಮಾಡಿ ಟೋಲ್ ಗೇಟ್ ಇಲ್ಲಿಂದ 6 ಕಿಮೀ ದೂರದಲ್ಲಿದ್ದು ಇದರಿಂದ ಸಾರ್ವಜನಿಕರಿಗೆ ಭಾರೀ ಹೊರೆ ಬೀಳಲಿದೆ. 2018ರಲ್ಲಿ ಬೆಳ್ಮಣ್ ಬಳಿ ಇದೇ ರೀತಿ ಟೋಲ್ ನಿರ್ಮಾಣಕ್ಕೆ ಮುಂದಾದಾಗ ನಾವು ಉಗ್ರ ಪ್ರತಿಭಟನೆ ನಡೆಸಿದ್ದೆವು.

    ಆಗ ಇಲ್ಲಿಂದ ಹೋಗಿದ್ದ ಟೋಲ್ ಮತ್ತೆ ಕಂಚಿನಡ್ಕ ಬಳಿ ತೆರೆಯಲು ಮುಂದಾಗಿದೆ. ಇದು ರಾಜ್ಯ ಹೆದ್ದಾರಿ ಆಗಿರುವ ಕಾರಣ ಜನರನ್ನು ಯಾಮಾರಿಸಲು ಸರಕಾರ ಮುಂದಾಗಿದೆ ಎಂದವರು ಆರೋಪಿಸಿದರು. ಮುಂದೆ ಬರಲಿರುವ ಟೋಲ್ ನಲ್ಲಿ ದ್ವಿಚಕ್ರ ವಾಹನಗಳಿಗೆ 30 ರೂ. ಮತ್ತು ಕಾರ್ ಗಳಿಗೆ 50 ರೂ., ಬಸ್ ಗಳಿಗೆ 100 ರೂ. ಸುಂಕ ವಸೂಲಿ ಮಾಡಲು ಮುಂದಾಗಿದೆ. ಇದರ ವಿರುದ್ಧ ಆಗಸ್ಟ್ 24ರಂದು ಪ್ರತಿಭಟನೆ ನಡೆಯಲಿದ್ದು ಇದಕ್ಕೆ ಬಸ್ ಮಾಲಕರ ಸಂಘ ಬೆಂಬಲ ನೀಡುತ್ತದೆ” ಎಂದು ಅವರು ಹೇಳಿದ್ದಾರೆ.

    ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ಕೋಶಾಧಿಕಾರಿ ಪ್ರಸಾದ್ ಹೆಗ್ಡೆ, ಸದಸ್ಯ ಜಯರಾಮ ಶೆಟ್ಟಿ, ಉಪಾಧ್ಯಕ್ಷ ಜೀವಂಧರ್ ಅಧಿಕಾರಿ, ದುರ್ಗಾ ಪ್ರಸಾದ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply