Connect with us

    BELTHANGADI

    ಮಕ್ಕಳ ಪ್ರವಾಸದ ಬಸ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ – ಇಬ್ಬರಿಗೆ ಗಾಯ

    ಬೆಳ್ತಂಗಡಿ ಡಿಸೆಂಬರ್ 28: ಮಕ್ಕಳ ಪ್ರವಾಸದ ಬಸ್ ಹಾಗೂ ಕೆಎಸ್ ಆರ್ ಟಿಸಿ ಬಸ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಿಡ್ಲೆ ಗ್ರಾಮದ ಬೂಡುಜಾಲು ಸಮೀಪ ನಡೆದಿದೆ.ಗಾಯಗೊಂಡವರನ್ನು ಟೂರಿಸ್ಟ್‌ ಬಸ್‌ ಚಾಲಕ ಅಭಿಷೇಕ್‌ ಹಾಗೂ ಬಸ್‌ ಪ್ರಯಾಣಿಕ ದುಗೇಶ್‌ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.


    ಸಿಂಧನೂರಿನ ಕಾಲೇಜು ವಿದ್ಯಾರ್ಥಿಗಳ ಪ್ರವಾಸದ ಟೂರಿಸ್ಟ್‌ ಬಸ್‌ ಧರ್ಮಸ್ಥಳ ಕಡೆಗೆ ಪ್ರಯಾಣಿಸುತ್ತಿದ್ದಾಗ ಕೊಕ್ಕಡ ಕಡೆಗೆ ಹೋಗುವ ಕೆಎಸ್ಸಾರ್ಟಿಸಿ ಬಸ್‌ ಢಿಕ್ಕಿ ಹೊಡೆದಿದೆ. ಇನ್ನು ಚಾಲಕರ ಸಹಿತ ಬಸ್‌ನಲ್ಲಿದ್ದ ಮಕ್ಕಳು ಹಾಗೂ ಪ್ರಯಾಣಿಕರು ಗಾಯಗೊಂಡಿದ್ದು ಗಾಯಾಳುಗಳನ್ನು ಸ್ಥಳೀಯ ಶೌರ್ಯ ತಂಡದವರ ನೇತೃತ್ವದಲ್ಲಿ ಉಜಿರೆ ಹಾಗೂ ಪುತ್ತೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಪ್ರವಾಸದ ಬಸ್‌ನಲ್ಲಿ ಒಟ್ಟು 40 ವಿದ್ಯಾರ್ಥಿಗಳು ಹಾಗೂ ನಾಲ್ವರು ಉಪನ್ಯಾಸಕರು ಮತ್ತು ಒಬ್ಬ ಅಡುಗೆ ಸಹಾಯಕರು ಕೂಡ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply