Connect with us

LATEST NEWS

ಬುಲೆಟ್ ಗೆ ಡಿಕ್ಕಿ ಹೊಡೆದ ಕಾರು: ಬುಲೆಟ್ ಸವಾರರಿಬ್ಬರು ಸಾವು

ಕುಂದಾಪುರ, ಫೆಬ್ರವರಿ 07: ಕಾರೊಂದು ಬುಲೆಟ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬುಲೆಟ್‌ ಸವಾರರಿಬ್ಬರು ಮೃತಪಟ್ಟ ಘಟನೆ ಕುಂದಾಪುರ ಚರ್ಚ್ ರಸ್ತೆಯ ಬಳಿ ನಿನ್ನೆ ರಾತ್ರಿ ನಡೆದಿದೆ.

ಮೃತರನ್ನು ಕುಂದಾಪುರ ನೇರಳೆಕಟ್ಟೆಯ ಕೇಶವ ಮೇಸ್ತಾ ಎಂಬವರ ಮಗ, ಬುಲೆಟ್ ಸವಾರ ಕಿರಣ್ ಮೇಸ್ತಾ (24) ಹಾಗೂ ಕುಂದಾಪುರ ಕರ್ಗುಂಜೆ ಗ್ರಾಮದ ರಾಜು ಪೂಜಾರಿ ಎಂಬವರ ಮಗ, ಹಿಂಬದಿ ಸವಾರ ರವೀಂದ್ರ ಕುಮಾರ್ ಎಂದು ಗುರುತಿಸಲಾಗಿದೆ.

ಶ್ಯಾಮಲಾ ಎಂಬವರು ತನ್ನ ಮಾರುತಿ ಅಲ್ಟೋ ಕಾರನ್ನು ಮದ್ದುಗುಡ್ಡೆ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಕುಂದಾಪುರ ಕಡೆಯಿಂದ ಮದ್ದುಗುಡ್ಡೆ ಕಡೆಗೆ ಹೋಗುತ್ತಿದ್ದ ಬುಲೆಟ್‌ಗೆ ಢಿಕ್ಕಿ ಹೊಡೆದಿದ್ದಾರೆ ಅಂತಾ ದೂರು ದಾಖಲಿಸಲಾಗಿದೆ.

ಇನ್ನು ಸವಾರರಿಬ್ಬರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ , ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಇಬ್ಬರು ಕೂಡ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.