Connect with us

DAKSHINA KANNADA

ಗಾಯಗೊಂಡು ಬಿದ್ದ ಹೋರಿಯನ್ನು ರಕ್ಷಿಸಿದ ಕುಕ್ಕೆ ಸುಬ್ರಹ್ಮಣ್ಯ ಎಸ್ಐ ಜಂಬೂರಾಜ್ ಮಹಾಜನ್..

ಸುಬ್ರಹ್ಮಣ್ಯ ಸೆಪ್ಟೆಂಬರ್ 22: ಅಕ್ರಮ ದನ ಸಾಗಾಟ ಸಂದರ್ಭ ವಾಹನ ಬಿದ್ದಿರುವ ಕೈ ಕಾಲು ಕಟ್ಟಿದ ಸ್ಥಿತಿಯಲ್ಲಿ ಹೋರಿಯೊಂದು ಕುಕ್ಕೆ ಸುಬ್ರಹ್ಮಣ್ಯದ ಶೇಷಕುಟೀರ ವಸತಿ ಗೃಹದ ಮುಂದೆ ರಸ್ತೆಯಲ್ಲಿ ಪತ್ತೆಯಾಗಿದ್ದು, ಸುಬ್ರಹ್ಮಣ್ಯ ಎಸ್ಐ ಜಂಬೂರಾಜ್ ಮಹಾಜನ್ ಅವರು ಸ್ಥಳೀಯರೊಂದಿಗೆ ಸೇರಿ ಹೋರಿಯ ರಕ್ಷಣೆ ಮಾಡಿದ್ದಾರೆ.


ಹೋರಿಯ ಒಂದು ಕಾಲು ಮುರಿತಕ್ಕೊಳಗಾಗಿದೆ ಪಶು ವೈದ್ಯಾಧಿಕಾರಿ ಡಾ.ವೆಂಕಟಾಚಲಪತಿ ಅವರು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಸ ವಿಲೇವಾರಿ ಘಟಕದ ಕಟ್ಟಡದಲ್ಲಿ ಹೋರಿಗೆ ಪ್ರಸ್ತುತ ಆಶ್ರಯ ಕಲ್ಪಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ಎಸ್ಐ ಜಂಬೂರಾಜ್ ಮಹಾಜನ್ ಅವರು ಇಲಾಖಾ ಯೂನಿಫಾರ್ಮ್​ನಲ್ಲಿದ್ದರೂ ಗಾಯಗೊಂಡು ಬಿದ್ದ ಹೋರಿ ರಕ್ಷಿಸಿದ್ದಾರೆ. ಹೀಗಾಗಿ, ಸಾರ್ವಜನಿಕರು ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.