DAKSHINA KANNADA
ತೋಟಕ್ಕೆ ಬೇರೆಯವರ ಕೋಣ ಬಂದಿತೆಂದು ಕತ್ತು ಕೊಯ್ದು ಹತ್ಯೆ
ಉಳ್ಳಾಲ, ಅಗಸ್ಟ್ 30: ತೋಟಕ್ಕೆ ಜಾನುವಾರುಗಳೇನಾದರೂ ಹೋದರೆ ಹೊಡೆದು ಕಳಿಸುವುದು ಸಾಮಾನ್ಯ. ಆದರೆ, ಇಲ್ಲಿ ತೋಟಕ್ಕೆ ಬೇರೆಯವರ ಕೋಣ ಬಂದಿತೆಂದು ಕತ್ತು ಕೊಯ್ದು ಕ್ರೂರವಾಗಿ ಹತ್ಯೆ ಮಾಡಲಾಗಿದೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಬಳಿಯ ಬಲ್ಯ ಎಂಬಲ್ಲಿ ಘಟನೆ ಜರುಗಿದೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಜನರು ಅಲ್ಲಿಗೆ ಧಾವಿಸಿ ಮಾಲೀಕನೇ ಕೋಣವನ್ನು ಬೇರೆಯವರ ಮೂಲಕ ಹತ್ಯೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.
ಬಲ್ಯ ಎಂಬಲ್ಲಿರುವ ಜಯರಾಮ ಶೆಟ್ಟಿ ಎಂಬವರ ತೋಟದ ಬಳಿ ಕೃತ್ಯ ನಡೆದಿದೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿದ ವೇಳೆ ಕೃತ್ಯ ನಡೆದ ಸ್ಥಳದ ಬಳಿ ಸ್ಕೂಟರ್ ಪತ್ತೆಯಾಗಿದೆ. ಕೃತ್ಯ ನಡೆಸಿ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆ ಸಂಬಂಧ ಜಯರಾಮ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
You must be logged in to post a comment Login