ತಮಿಳು ಧಾರಾವಾಹಿ ಲೋಕದಲ್ಲಿ ಮಿಂಚುತ್ತಿರುವ ಮುದ್ದು ಮುಖದ ಕರಾವಳಿ ಚೆಲುವೆ ಮಾತಿಗೆ ಸಿಕ್ಕಾಗ……………

ಮಂಗಳೂರು ಎಪ್ರಿಲ್ 7: ಪಟ್-ಪಟಾಂತ ಹರಳು ಹುರಿದಂತಹ ಮಾತು, ಮುದ್ದು ಮುಖದ ಚೆಲುವೆ, ಗಿಣಿಮರಿಯಂತೀರೋ ಈಕೆ ಪಕ್ಕಾ ನಮ್ಮನೆ ಹುಡ್ಗಿ ಅನ್ನೋ ಫೀಲ್. ಇನ್ನು ಕಲರ್ಸ್ ಸೂಪರ್ ನಲ್ಲಂತೂ ಮಂಗ್ಳೂರ್ ಹುಡ್ಗಿಯಾಗಿ ಈಕೆ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದೇ ಕೆಡಿಸಿದ್ದು. ಅರೆ.. ನಾವ್ ಯಾರ್ ಬಗ್ಗೆ ಮಾತಾಡ್ತಾ ಇದ್ದೀವಿ ಅಂತ ಕನ್ ಫ್ಯೂಸ್ ಆಗ್ತೀದ್ದೀರಾ. ಡೌಟೆ ಬೇಡ… ಅದೇ ಬಬ್ಲಿ ಗರ್ಲ್‌, ಕರಾವಳಿಯ ಬೆಡಗಿ ರಾಧಿಕಾ ರಾವ್..

ಅಂದಹಾಗೆ ಹೊಸತನದ ಹಬ್ಬ ಯುಗಾದಿ ಸಂಭ್ರಮದಲ್ಲಿದ್ದ ಚೆಲುವೆ ರಾಧಿಕಾ ಅಪರೂಪಕ್ಕೆ ಮಾತಿಗೆ ಸಿಕ್ಕಾಗ ಚಟ್-ಪಟಾಂತ ಮಾತಾಡಿ ತಮ್ಮ ಅಂತರಂಗವನ್ನು ಬಿಚ್ಚಿಟ್ಟಿದ್ದಾರೆ.

‘ಏಸ’ ಚಿತ್ರದ ಮೂಲಕ ಕರಾವಳಿ ಜನತೆಗೆ ಪರಿಚಯವಾಗಿ, ತದನಂತರ ಸಡನ್ ಆಗಿ ಸೀರಿಯಲ್ ಪ್ರಪಂಚಕ್ಕೆ ಕಾಲಿಟ್ಟು ಇದೀಗ ಕನ್ನಡ ಹಾಗೂ ತಮಿಳು ಧಾರಾವಾಹಿ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ರಾಧಿಕಾ ರಾವ್ ಸದ್ಯ ಬಹುಬೇಡಿಕೆಯ ಕಿರುತೆರೆ ನಟಿ.
ಡ್ರಾಯಿಂಗ್, ಡ್ಯಾನ್ಸ್, ಯಕ್ಷಗಾನದ ಹುಚ್ಚಿರುವ ದುಂಡು ಮುಖದ ಚೆಲುವೆ ಮುದ್ದು-ಮುದ್ದಾಗಿ ಮಿರರ್ ಇಮೇಜ್ ನಲ್ಲಿ ಮಾತಾಡಿದ್ದಾರೆ. ಮಂಗಳೂರು ಮಿರರ್ ನ, ಮಿರರ್ ಇಮೇಜ್ ನಟಿ ರಾಧಿಕಾ ರಾವ್ ಜೊತೆ ನಡೆಸಿದ ಚಿಟ್ ಚಾಟ್ ಇಲ್ಲಿದೆ ನೋಡಿ…….

VIDEO