Connect with us

LATEST NEWS

ಒಂದೆರಡು ದಿನಗಳಲ್ಲಿ ಎಲ್ಲಾ ಭಿನ್ನಮತ ಶಮನ – ಬಿವೈ ರಾಘವೇಂದ್ರ

ಉಡುಪಿ ಜನವರಿ 19: ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದೆ ಅಸಮಧಾನಗೊಂಡ ಶಾಸಕ ರೇಣುಕಾಚಾರ್ಯ ಸಹಜವಾಗಿಯೇ ತಮ್ಮ ನೋವನ್ನು ಬೇರೆಬೇರೆ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಂಸದ ಬಿ ವೈ ರಾಘವೇಂದ್ರ ಪ್ರತಿಕ್ರಿಯಿಸಿದ್ದಾರೆ.


ಉಡುಪಿ ಉಡುಪಿ ಆನೆಗುಡ್ಡೆ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ 1008 ಗಣಯಾಗ‌ದಲ್ಲಿ ಸಿಎಂ ಜೊತೆ ಪಾಲ್ಗೊಂಡ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಸಚಿವ ಸಂಪುಟ ವಿಸ್ತರಣೆ ಸಂದರ್ಭ ಸಚಿನ ಸ್ಥಾನ ಸಿಗದವರಿಂದ ಅಸಮಧಾನ ಸಹಜವಾಗಿದ್ದು, ಶಾಸಕ ರೇಣುಕಾಚಾರ್ಯ ಅವರು ಸಹಜವಾಗಿಯೇ ತಮ್ಮ ನೋವನ್ನು ಬೇರೆಬೇರೆ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಮನುಷ್ಯ ಅಂದಮೇಲೆ ನೋವು ಇರೋದು ಸಹಜ, ಒಬ್ಬೊಬ್ಬರಿಗೂ ಅವರದೇ ವೈಯಕ್ತಿಕ ವಿಚಾರ ಬೇರೆ ಬೇರೆ ಇರುತ್ತೆ, ಒಂದು ಚೌಕಟ್ಟಿನಲ್ಲಿ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಲು ಅವಕಾಶ ಇದೆ. ಒಂದೆರಡು ದಿನ ನೋವನ್ನು ಹೊರಹಾಕುತ್ತಾರೆ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತೇವೆ ಎನ್ನುವ ವಿಶ್ವಾಸವಿದೆ ಎಂದರು.

Advertisement
Click to comment

You must be logged in to post a comment Login

Leave a Reply