Connect with us

    LATEST NEWS

    ಮದುವೆ ಮಂಟಪದಲ್ಲಿ ವಧು, ವರನ ಪುಶ್ ಅಪ್ಸ್ ಕಾಂಪಿಟೇಶನ್ ವಿಡಿಯೋ ವೈರಲ್

    ನವದೆಹಲಿ, ಅಗಸ್ಟ್ 29: ಫಿಟ್‍ನೆಸ್ ನಮ್ಮ ಸೋಮಾರಿತನವನ್ನು ಹೊಗಲಾಡಿಸಿ ದಿನಚರಿಯನ್ನು ಆರಂಭಿಸಲು ಸ್ಫೂರ್ತಿದಾಯಕವಾಗಿದೆ. ಸದ್ಯ ಮದುವೆ ಸಮಾರಂಭದಲ್ಲಿ ವಧು-ವರ ಇಬ್ಬರೂ ಪುಶ್ ಅಪ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಹೌದು ಸಾಮಾನ್ಯವಾಗಿ ಮದುವೆ ಸಮಾರಂಭದಲ್ಲಿ ವಧು ಹಾಗೂ ವರ ಅತಿಥಿಗಳೊಂದಿಗೆ ಫೋಟೋಗೆ ಪೋಸ್ ನೀಡುವುದನ್ನು ನೋಡಿರುತ್ತೇವೆ. ಕೆಲವು ಜೋಡಿ ಹಾಡು ಅಥವಾ ಒಟ್ಟಿಗೆ ನೃತ್ಯ ಪ್ರದರ್ಶಿಸುವ ಮೂಲಕ ಮನರಂಜನೆ ನೀಡುತ್ತಾರೆ. ಆದರೆ ಜೋಡಿಯೊಂದು ಮದುವೆ ಕಾರ್ಯಕ್ರಮದಲ್ಲಿ ಅತಿಥಿಗಳಿರುವುದನ್ನು ಲೆಕ್ಕಿಸದೇ ನೀನಾ-ನಾನಾ ಎಂಬಂತೆ ಪುಶ್ ಅಪ್ಸ್ ಮಾಡಿದ್ದಾರೆ. ಇದನ್ನು ಕಂಡು ಅಲ್ಲಿದ್ದವರೆಲ್ಲಾ ಬೆರಗಾಗಿದ್ದಾರೆ.

    ಸದ್ಯ ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಧು ವರ ಇಬ್ಬರು ಮದುವೆಯ ಉಡುಪಿನಲ್ಲಿಯೇ ವೇದಿಕೆಯ ಮೇಲೆ ಪುಶ್ ಅಪ್ಸ್ ಮಾಡಿದ್ದಾರೆ. ವೀಡಿಯೋದಲ್ಲಿ ವಧು ಕೆನೆ ಮತ್ತು ಕೆಂಪು ಬಣ್ಣದ ಲೆಹೆಂಗಾ, ಭಾರೀ ಚಿನ್ನಾಭರಣಗಳಲ್ಲಿ ಮಿಂಚುತ್ತಿದ್ದರೆ, ವರ ಗುಲಾಬಿ ಬಣ್ಣದ ಶೇರ್ವಾನಿ ಧರಿಸಿದ್ದಾರೆ. ಮದುವೆ ಉಡುಪು ಧರಿಸಿದ್ದರು ಇಬ್ಬರು ಬಹಳ ಸುಲಭವಾಗಿ ಪುಶ್ ಅಪ್ಸ್ ಮಾಡಿದ್ದಾರೆ. ಈ ವಧು ವರರು ಫಿಟ್ನೆಸ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply