Connect with us

  DAKSHINA KANNADA

  ‘ಬ್ರ್ಯಾಂಡ್ ಮಂಗಳೂರು ರೋಹನ್ ಕಪ್’ -2024’ಕ್ರಿಕೆಟ್ ಸಂಪನ್ನ : ಬೆಂಗಳೂರು ನಗರ ಪ್ರಥಮ,ಹಾಸನ ದ್ವಿತೀಯ..!

  ಮಂಗಳೂರು ;ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೆಯುಡಬ್ಲ್ಯುಜೆ ರಾಜ್ಯಮಟ್ಟದ ‘ಬ್ರ್ಯಾಂಡ್ ಮಂಗಳೂರು ರೋಹನ್ ಕಪ್’ -2024’ಕ್ರಿಕೆಟ್ ಪಂದ್ಯಾಟ ಜ.5ರಿಂದ 7 ರವರೆಗೆ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದ ಕ್ಯಾ.ಪ್ರಾಂಜಲ್ ‌ಸ್ಮರಣೆ ಯೊಂದಿಗೆ ನಡೆದ ಪಂದ್ಯಾವಳಿ ಯಲ್ಲಿ ಬೆಂಗಳೂರು ನಗರ ಕಾರ್ಯ ನಿರತ ಪತ್ರಕರ್ತರ ಸಂಘ ಪ್ರಥಮ ಹಾಗೂ ಹಾಸನ ಕಾರ್ಯ ನಿರತ ಪತ್ರಕರ್ತರ ತಂಡ ದ್ವಿತೀಯ ಹಾಗೂ ಮಂಡ್ಯ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ತೃತೀಯ ಪ್ರಶಸ್ತಿ ಗಳಿಸಿದೆ.

  ಸಮಾರೋಪ ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜಾ,ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ, ದ.ಕ ಜಿಲ್ಲಾ ಧಿಕಾರಿ ಮುಲ್ಲೈ ಮುಗಿಲನ್ ,ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ, ತಿಳಿಸಿದ್ದಾರೆ.


  ಈ ಸಂದರ್ಭದಲ್ಲಿ ಕರ್ನಾಟಕ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ,ವೇದಿಕೆ ಯಲ್ಲಿಕಿಶೋರ್ ಆಳ್ವ,ಸುಚರಿತ ಶೆಟ್ಟಿ, ಇಫ್ತಿಕಾರ್ ಅಲಿ,ಮೂಡಾ ಅಧ್ಯಕ್ಷ ಮನ್ಸೂರ್ ಅಲಿ,ಪೊಲೀಸ್ ಅಧಿಕಾರಿ ಗೋಪಾಲ್ ಕುಂದರ್, ಲೀಲಾಕ್ಷ ಕರ್ಕೇರಾ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು.ರಾಜ್ಯ ಸಮಿತಿಯ ಪದಾಧಿಕಾರಿಗಳಾದ ಮತ್ತಿಕೆರೆ ಜಯರಾಮ್,ಜಗನ್ನಾಥ ಶೆಟ್ಟಿ ಬಾಳ, ಇಬ್ರಾಹಿಂ ಅಡ್ಕಸ್ಥಳ,ವಾರ್ತಾ ಧಿಕಾರಿ ಖಾದರ್ ಶಾ,ಮಹಾರಾಷ್ಟ್ರ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್,ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆರ್ ರಾಮಕೃಷ್ಣ,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ,ಕೋಶಾಧಿಕಾರಿ ಪದಾಧಿಕಾರಿಗಳಾದ ವಿಜಯ ಕೋಟ್ಯಾನ್, ರಾಜೇಶ್ ದಡ್ಡಂಗಡಿ, ಸಂಘ ಟಕರಾದ ವಿಲ್ಫೇಡ್ ಡಿ ಸೋಜ, ಆರಿಫ್ ಕೆ, ರಾಜೇಶ್ ಪೂಜಾರಿ,ಪ್ರಧಾನ ಸಂಚಾಲಕ ಅನ್ನು ಮಂಗಳೂರು ಉಪಸ್ಥಿತರಿದ್ದರು.
  ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.

  Share Information
  Advertisement
  Click to comment

  You must be logged in to post a comment Login

  Leave a Reply