ಬ್ರಹ್ಮಾವರ ಡಿಸೆಂಬರ್ 06: ತೆಂಗಿನ ಎಣ್ಣೆ ಮಿಲ್ ವೊಂದರಲ್ಲಿ ಆಕಸ್ಮಿಕ ಬೆಂಕಿ ಅನಾಹುತ ಉಂಟಾಗಿ ಇಡೀ ತೆಂಗಿನ ಎಣ್ಣೆ ಮಿಲ್ ಸುಟ್ಟು ಭಸ್ಮವಾದ ಘಟನೆ ಕೊಕ್ಕರ್ಣೆ ಪೇಟೆಯಲ್ಲಿ ಸಂಭವಿಸಿದೆ.


ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ಯಾವುದೇ ಪ್ರಾಣಾಪಾಯ  ಸಂಭವಿಸಿಲ್ಲ. ಫ್ಯಾಕ್ಟರಿಯಲ್ಲಿ ದಾಸ್ತಾನು ಇರಿಸಿದ ತೆಂಗಿನಎಣ್ಣೆ ಮತ್ತು ಕೊಬ್ಬರಿ ಬೆಂಕಿಗೆ ಆಹುತಿಯಾಗಿದ್ದು, ಬೆಂಕಿಯ ಕೆನ್ನಾಲೆಗೆ ಫ್ಯಾಕ್ಟರಿಯ ಬಹುಭಾಗ ಸುಟ್ಟು ಕರಕಲಾಗಿದೆ.

Share Information