Connect with us

    DAKSHINA KANNADA

    ಯುವಕ-ಯುವತಿ ಚಾಟಿಂಗ್ : ವಿಮಾನ ಹಾರಾಟ ಮೊಟಕುಗೊಳಿಸಿ ತೀವ್ರ ತಪಾಸಣೆ

    ಮಂಗಳೂರು,ಆಗಸ್ಟ್ 14 : ಮಂಗಳೂರು ಏರ್ ಪೋರ್ಟ್ ನಲ್ಲಿ ಯುವಕ-ಯುವತಿ ಚಾಟಿಂಗ್ ಭಾರೀ ಆತಂಕ ಸೃಷ್ಟಿಸಿದ ಘಟನೆ ನಡೆದಿದ್ದು, ರನ್ ವೇನಲ್ಲಿ ಪ್ರಯಾಣಿಕರನ್ನು ಒಳಗೊಂಡಿದ್ದ ವಿಮಾನ ಹಾರಾಟ ಸ್ಥಗಿತಗೊಳಿಸಿ ತಪಾಸಣೆ ನಡೆದಿದೆ. ‌

    ಮಂಗಳೂರು ಏರ್ ಪೋರ್ಟ್ ನಲ್ಲಿ ವಾಟ್ಸಪ್ ಚಾಟ್ ಆತಂಕಕ್ಕೆ ಕಾರಣವಾಗಿದ್ದು ಭದ್ರತೆ ವಿಚಾರಕ್ಕೆ ಸಂಬಂಧಿಸಿ ಚಾಟ್ ಮಾಡಿದ್ದ ಯುವಕ-ಯುವತಿಯನ್ನು ವಶಕ್ಕೆ ಪಡೆಯಲಾಗಿದೆ. ಭದ್ರತೆ ಬಗ್ಗೆ ಆತಂಕ ಹುಟ್ಟಿಸುವ ರೀತಿಯಲ್ಲಿ ವಾಟ್ಸಪ್ ಚಾಟ್ ಮಾಡಿದ್ದರು ಎನ್ನಲಾಗಿದೆ.

    ಮಂಗಳೂರು ಏರ್ ಪೋರ್ಟ್ ಮೂಲಕ ಬೆಂಗಳೂರಿಗೆ ತೆರಳಲು ಯುವತಿಯೊಬ್ಬಳು ಬಂದಿದ್ದು, ಮಂಗಳೂರು ಏರ್ ಪೋರ್ಟ್ ನಿಂದ ಮುಂಬೈಗೆ ತೆರಳಲು ಮತ್ತೊಬ್ಬ ಯುವಕ ಆಗಮಿಸಿದ್ದ. ಇಬ್ಬರೂ ಪರಿಚಯಸ್ಥರೇ ಆಗಿದ್ದು, ಬೇರೆ ಬೇರೆ ವಿಮಾನದಲ್ಲಿ ಪ್ರಯಾಣಕ್ಕೆ ಸಿದ್ದತೆ ನಡೆಸಿದ್ದರು. ಯುವಕ ಮುಂಬೈ ವಿಮಾನದಲ್ಲಿ ಕೂತಿದ್ದು, ರನ್ ವೇಗೆ ಆಗಮಿಸಲು ವಿಮಾನ ಸಿದ್ದವಾಗಿತ್ತು. ಈ ವೇಳೆ ಬೆಂಗಳೂರಿಗೆ ತೆರಳಲು ಏರ್ ಪೋರ್ಟ್ ನಲ್ಲಿ ಕೂತಿದ್ದ ಯುವತಿ ಜೊತೆ ಯುವಕ ಚಾಟಿಂಗ್ ನಲ್ಲಿ ನಿರತವಾಗಿದ್ದ.

    ಚಾಟಿಂಗ್ ನಲ್ಲಿ ಭದ್ರತೆಗೆ ಅಪಾಯವೊಡ್ಡುವ ವಿಚಾರಗಳ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಯುವತಿಯ ಚಾಟಿಂಗ್ ಗಮನಿಸಿ ಪ್ರಯಾಣಿಕರೊಬ್ಬರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.‌ ಮಾಹಿತಿ ಪಡೆದು ಮುಂಬೈ ವಿಮಾನ ತಡೆದು ಪ್ರಯಾಣಿಕರನ್ನು ಇಳಿಸಿ ತಪಾಸಣೆ ನಡೆಸಲಾಗಿದೆ. ಸದ್ಯ ಯುವಕ ಮತ್ತು ಯುವತಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗಿದ್ದು, ವಿಚಾರಣೆ ವೇಳೆ ತಮಾಷೆಗಾಗಿ ಮಾಡಿದ್ದಾಗಿ ಜೋಡಿ ಹೇಳಿಕೆ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply