LATEST NEWS
ಸ್ನಾನ ಮಾಡಲು ನದಿಗಿಳಿದ ಬಾಲಕ ಸಾವು..!!
ಮಂಗಳೂರು ಮಾರ್ಚ್ 13 : ಸ್ನಾನ ಮಾಡಲೆಂದು ನದಿಗೆ ಇಳಿದ ಬಾಲಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಳಿಯೂರು ಎಂಬಲ್ಲಿ ನಡೆದಿದೆ.
ಮೂಲತಃ ಬಂಟ್ವಾಳ ತಾಲೂಕಿನ ಮಾಣಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ 16 ವರ್ಷದ ಮಹಮ್ಮದ್ ಸಲ್ಮಾನ್ ಮೃತ ಬಾಲಕನಾಗಿದ್ದಾನೆ.
ಈತ ತನ್ನ ಸೋದರ ಸಂಬಂಧಿ 16 ವರ್ಷದ ಮಹಮ್ಮದ್ ಇರ್ಫಾರ್ ಜತೆಗೂಡಿ ಪೆರ್ನೆಯಲ್ಲಿನ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದು, ನದಿಯಲ್ಲಿ ಸ್ನಾನ ಮಾಡುವ ಬಯಕೆಯಿಂದ ಬಿಳಿಯೂರಿನ ಅಣೆಕಟ್ಟಿನ ಬಳಿ ನದಿಗೆ ಇಳಿದಿದ್ದಾರೆ.
ಈ ವೇಳೆ ಸಲ್ಮಾನ್ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಈತನ ಜತೆಗಿದ್ದ ಮಹಮ್ಮದ್ ಇರ್ಫಾರ್ ನನ್ನು ರಕ್ಷಣೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login