Connect with us

MANGALORE

ಬಾಂಬರ್ ಆದಿತ್ಯ ರಾವ್ ಮಂಪರು ಪರೀಕ್ಷೆ ಪೂರ್ಣ

ಮಂಗಳೂರು ಸೆಪ್ಟೆಂಬರ್ 5: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದ ಬಾಂಬರ್ ಆದಿತ್ಯರಾವ್ ಮಂಪರು ಪರೀಕ್ಷೆ ನಿನ್ನೆ ಕೊನೆಗೊಂಡಿದೆ. ಬೆಂಗಳೂರಿನ ಮಡಿವಾಳ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಎರಡು ದಿನಗಳ ಆದಿತ್ಯ ರಾವ್ ಅವರ ಮಂಪರು ಪರೀಕ್ಷೆಯನ್ನು ನಡೆಸಲಾಗಿತ್ತು.


ಜನವರಿ 20 ರಂದು ಮಂಗಳೂರು ಅಂತರಾಷ್ಟಿಯ ವಿಮಾನ ನಿಲ್ದಾಣಕ್ಕೆ ಆರೋಪಿ ಆದಿತ್ಯ ರಾವ್ ಬಾಂಬ್ ಇಟ್ಟು, ಬೆಂಗಳೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದ. ನಂತರ ಆತನನ್ನು ವಶಕ್ಕೆ ಪಡೆದ ಮಂಗಳೂರು ಪೊಲೀಸರು ತನಿಖೆ ನಡೆಸಿದ್ದರು. ಆದರೆ ತನಿಖೆ ಸಂದರ್ಭ ಪೊಲೀಸರ ಕೆಲವೊಂದು ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ನೀಡದ ಹಿನ್ನಲೆ ಮಂಪರು ಪರೀಕ್ಷೆಗಾಗಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಹಿನ್ನಲೆ ಬೆಂಗಳೂರಿನಲ್ಲಿ ಆರೋಪಿ ಆದಿತ್ಯರಾವ್ ಗೆ ಮಂಪರು ಪರೀಕ್ಷೆ ನಡೆಸಲಾಗಿತ್ತು. ಮಂಪರು ಪರೀಕ್ಷೆ ಪೂರ್ಣಗೊಂಡ ಹಿನ್ನಲೆ ಆರೋಪಿಯನ್ನು ಮತ್ತೆ ಮಂಗಳೂರಿಗೆ ಕರೆ ತರಲಾಗುತ್ತಿದೆ.

Facebook Comments

comments