DAKSHINA KANNADA
ಬೊಳುವಾರು -ಸೋಡಾ ಬಾಟಲಿಯಿಂದ ಹಲ್ಲೆ ಆರೋಪಿಗಳ ಬಂಧನ

ಪುತ್ತೂರು ಫೆಬ್ರವರಿ 14: ಬೊಳುವಾರಿನಲ್ಲಿ ಫೆಬ್ರವರಿ 12 ರ ತಡ ರಾತ್ರಿ ಇತ್ತಂಡದ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹಲ್ಲೆ ನಡೆಸಿದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಹಲ್ಲೆಗೊಳಗಾದ ಟಿಪ್ಪರ್ ಚಾಲಕ ಬಾಲುಗೋಡು ನಿವಾಸಿ ಉಮೇಶ್ ಅವರು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರ ದೂರಿನಂತೆ ನರ್ಮೇಶ್ ಮತ್ತು ಬನ್ನೂರು ನೆಕ್ಕಿಲದ ಪ್ರಸಾದ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದ್ದು. ಆರೋಪಿಗಳನ್ನು ಪೊಲೀಸರು ಬಂಧಿಸಿ ಫೆಬ್ರವರಿ .14 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ
