LATEST NEWS
ಕರಾವಳಿ ಬೆಡಗಿ, ಐಶ್ವರ್ಯ ರೈ ಮಂಗಳೂರಿನಲ್ಲಿ : ಮದುವೆ ಸಮಾರಂಭದಲ್ಲಿ ಭಾಗಿ

ಕರಾವಳಿ ಬೆಡಗಿ, ಐಶ್ವರ್ಯ ರೈ ಮಂಗಳೂರಿಗೆ : ಮದುವೆ ಸಮಾರಂಭದಲ್ಲಿ ಭಾಗಿ
ಮಂಗಳೂರು,ಡಿಸೆಮಬರ್ 03 : ಖ್ಯಾತ ಬಾಲಿವುಡ್ ನಟಿ , ಕರಾವಳಿಯ ಬೆಡಗಿ , ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಅವರು ಮಂಗಳೂರಿಗೆ ಆಗಮಿಸಿದ್ದರು.
ಐಶ್ವರ್ಯ ರೈ ಅವರ ತಾಯಿ ಬೃಂದಾ ರೈ ಅವರ ಸೋದರ ಸೋಂತಾಡಿ ಉದಯಕುಮಾರ್ ಶೆಟ್ಟಿ ಅವರ ಸುಪುತ್ರ ಉಜ್ವಲ್ ಅವರ ಮದುವೆ ಸಮಾರಂಭದ ಔತನ ಕೂಟದಲ್ಲಿ ಪಾಲ್ಗೊಳ್ಳಲು ಮಂಗಳೂರಿಗೆ ಕುಟುಂಬ ಸಮೇತ ಆಗಮಿಸಿದ್ದರು.

ಮಂಗಳೂರು ನಗರದ ಕೊಡಿಯಲ್ ಬೈಲ್ ಟಿ ಎಂ ಎ ಪೈ ಸಭಾಂಗಣದಲ್ಲಿ ರಾತ್ರಿ ನಡೆದ ಮದುವೆ ಸಮಾರಂಭದ ಔತಣ ಕೂಟದಲ್ಲಿ ತಾಯಿ ಬೃಂದಾ ರೈ, ಮಗಳು ಆರಾಧ್ಯ ಅವರೊಂದಿಗೆ ಆಗಮಿಸಿದ್ದ ಯಶ್ವರ್ಯ ರೈ ಅವರು ಉತ್ಸಾಹದಿಂದ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತುಳು ನಾಡಿನ ಸಾಂಪ್ರಾದಾಯಿಕ ಉಡುಗೆಯಾದ ರೇಷ್ಟೇ ಜರಿ ಸೀರೆಯನ್ನು ಉಟ್ಟಿದ್ದರು.
ಅತ್ಯಂತ ಸರಳವಾಗಿ ಕಾಣುತ್ತಿದ್ದರು.
ಇದೇ ಸಂದರ್ಭದಲ್ಲಿ ಸಮಾರಂಭಕ್ಕೆ ಬಂದ ಕುಟುಂಬದ ಅನೇಕ ಹಿರಿಯರ ಕಾಲಿಗೆ ಎರಗಿ ಐಶ್ವರ್ಯ ರೈ ಅವರು ಆಶೀರ್ವಾದ ಪಡೆದುಕೊಳ್ಳುತ್ತಿವುದು ಗಮನಾರ್ಹವಾಗಿತ್ತು.
ಇತ್ತೀಚೆಗಷ್ಟೆ ತಂದೆಯ ಉತ್ತರ ಕ್ರೀಯೇಗಾಗಿ ಉಪ್ಪಿನಂಗಡಿಗೆ ಬಂದ ಐಶ್ವರ್ಯ ರೈ ಅವರದು ಕರಾವಳಿಗೆ ಇದು ಎರಡನೇ ಭೇಟಿಯಾಗಿದೆ.
ವಿಡಿಯೋಗಾಗಿ…