ಸೇತುವೆಯಿಂದ ನದಿಗೆ ಬಿದ್ದ ಬೊಲೆರೋ ವಾಹನ ಮಹಿಳೆ ಸಾವು

ಮಂಗಳೂರು ಜನವರಿ 12: ಕಿನ್ನಿಗೋಳಿ ಸಮೀಪ ಸಂಕಲಕರಿಯದಲ್ಲಿ ಬೊಲೆರೋ ಒಂದು ನದಿಗೆ ಬಿದ್ದ ಪರಿಣಾಮ ಓರ್ವ ಮಹಿಳೆ ಮೃತಪಟ್ಟ ಘಟನೆ ನಡೆದಿದೆ.

ಮೃತ ಮಹಿಳೆಯನ್ನು ಕಾರ್ಕಳ ತಾಲೂಕಿನ ಬೋಳ ನಿವಾಸಿ ಡಯಾನಾ ಮಸ್ಕರೇನಸ್ ಎಂದು ಗುರುತಿಸಲಾಗಿದೆ. ಬೊಲೆರೋ ವಾಹನದಲ್ಲಿದ್ದ ಇತರ ಮೂವರನ್ನು ರಕ್ಷಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಸಂಬಂಧಿಕರ ಮದುವೆಗೆ ಬೊಲೆರೋದಲ್ಲಿ ಡಯಾನಾ ಮಸ್ಕರೇನಸ್ ತಮ್ಮ ಪ್ಯಾಮಿಲಿ ಜೊತೆ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿರುವ ಸಂದರ್ಭ ಈ ಘಟನೆ ನಡೆದಿದೆ.

ಕಿನ್ನಿಗೋಳಿ ಬಳಿಯ ಸಂಕಲಕರಿಯದಲ್ಲಿ ಶಾಂಭವಿ ನದಿಯ ತಡೆಯಿಲ್ಲದ ಸೇತುವೆ ದಾಟುತ್ತಿದ್ದಾಗ ಬೊಲೆರೋ ಆಯತಪ್ಪಿ ನದಿಗೆ ಬಿದ್ದಿದೆ. ಸ್ಥಳದಲ್ಲಿದ್ದ ಸ್ಥಳೀಯರು ಮೂವರು ಮಂದಿಯನ್ನು ನದಿಯಿಂದ ಮೇಲೆಕತ್ತಿದ್ದರು ಆದರೆ ಡಯಾನಾ ಮಸ್ಕರೇನಸ್ ನೀರುಪಾಲಾಗಿದ್ದರು.
ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಯಾನಾ ಮಸ್ಕರೇನಸ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಮುಲ್ಕಿ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments

comments