ಮಂಗಳೂರಿನಲ್ಲಿ ಮಂಚದ ಸರಳಿಗೆ ಕತ್ತು ಸಿಲುಕಿಸಿ ವಿಧ್ಯಾರ್ಥಿನಿಯ ಬರ್ಬರ ಕೊಲೆ

ಮಂಗಳೂರು ಜೂನ್ 7: ಮಂಗಳೂರಿನ ಬಾಡಿಗೆ ಮನೆಯೊಂದರಲ್ಲಿ ಚಿಕ್ಕಮಗಳೂರು ಮೂಲದ ವಿಧ್ಯಾರ್ಥಿನಿಯ ಕುತ್ತಿಗೆಯನ್ನು ಮಂಚದ ಸರಳಿಗೆ ಸಿಲುಕಿಸಿ ಬರ್ಬರ ಕೊಲೆ ಮಾಡಲಾಗಿದೆ.

ನಗರದ ಅತ್ತಾವರ ಕೆಎಂಸಿ ಹಿಂಭಾಗದದಲ್ಲಿರುವ ಬಾಡಿಗೆ ಮನೆಯೊಂರದಲ್ಲಿ ಈ ಕೊಲೆ ನಡೆದಿದೆ ಮಂಗಳೂರಿನ ಬಾಡಿಗೆ ಮನೆಯೊಂದರಲ್ಲಿ ಈ ಕೊಲೆ ನಡೆದಿದ್ದು ಕೊಲೆಯಾ ವಿದ್ಯಾರ್ಥಿನಿಯನ್ನು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ 22 ವರ್ಷದ ಅಂಜನಾ ವಷಿಷ್ಠಾ ಎಂದು ಗುರುತಿಸಲಾಗಿದೆ.

ಈಕೆ ಮಂಗಳೂರಿನ ಕಾಲೇಜೊಂದರ ವಿಧ್ಯಾರ್ಥಿನಿ ಎಂದು ಹೇಳಲಾಗಿದೆ. ನಗರದ ಅತ್ತಾವರದ ಮೆಡಿಕಲ್ ಕಾಲೇಜ್ ಬಳಿ ಇರುವ ಬಾಡಿಗೆ ಮನೆಗೆ ಕಳೆದ 5 ದಿನಗಳ ಹಿಂದೆ ಪ್ರಿಯಕರನ ಜೊತೆ ಬಂದಿದ್ದರು ಎಂದು ಹೇಳಲಾಗಿದೆ.

ಅಂಜನ ಮತ್ತು ಆಕೆಯ ಪ್ರಿಯಕರ ದಂಪತಿ ಸೋಗಿನಲ್ಲಿ ಬಂದು ರೂಂ ಬಾಡಿಗೆ ಪಡೆದಿದ್ದರು ಎನ್ನಲಾಗಿದೆ. ಆದ್ದರಿಂದ ಪ್ರಿಯಕರ ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಅಂಜಲಿ ಅವರ ಆಧಾರ್ ಕಾರ್ಡ್ ಆದಾರದ ಮೇಲೆ ಪೊಲೀಸರು ಗುರುತು ಪತ್ತೆ ಹಚ್ಚಿದ್ದು, ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಮಾಡಿ ಪರಾರಿಯಾಗಿರುವ ಆಕೆಯ ಪ್ರಿಯಕರನ ಪತ್ತೆಗೆ ಪೊಲಿಶರು ಶೋಧ ಕಾರ್ಯ ಆರಂಭಿಸಿದ್ದಾರೆ.

Facebook Comments

comments