ಮಂಗಳೂರು ಕೋರ್ಟ್ ಆವರಣದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ರಕ್ತದ ಕಲೆ

ಮಂಗಳೂರು ಜುಲೈ 12: ಮಂಗಳೂರಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಲಾಗಿದ್ದ ಸ್ಕಾರ್ಪಿಯೋ ಕಾರ್ ನ ಮೇಲೆ ರಕ್ತದ ಕಲೆಗಳು ಕಂಡು ಬಂದ ಹಿನ್ನಲೆಯಲ್ಲಿ ಕೆಲಕಾಲ ಆತಂಕ ಸೃಷ್ಠಿಸಿದ ಘಟನೆ ನಡೆದಿದೆ.

ಇದು ಮಂಗಳೂರಿನ ನ್ಯಾಯಾವಾದಿಯೊಬ್ಬರಿಗೆ ಸೇರಿದ ವಾಹನವಾಗಿ ಎಂದು ತಿಳಿದು ಬಂದಿದ್ದು, ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕಾರನ್ನು ನಿಲ್ಲಿಸಲಾಗಿತ್ತು. ಸ್ಕಾರ್ಪಿಯೋ ಕಾರಿನ ಮೆಲ್ಮೈಯಲ್ಲಿ ಹಾಗೂ ನೆಲದ ಮೇಲೆ ರಕ್ತದ ಕಲೆ ಗಮನಿಸಿದ ವಕೀಲರು ಇದನ್ನು ನಗರ ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದ್ದಾರೆ.

ಮಾಹಿತಿ ಪಡೆದ ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಹಿರಿಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ವಾಹನ ಹಾಗೂ ನೆಲದ ಮೇಲೆಲ್ಲಾ ರಕ್ತ ಚಿಮ್ಮಿದ್ದ ಕಲೆಗಳು ಕಂಡು ಬಂದಿದೆ. ಆದರೆ ಇದು ಯಾವ ಕಾರಣಕ್ಕಾಗಿ ಆಗಿದೆ ಎಂಬುವುದು ತನಿಖೆಯಿಂದ ತಿಳಿಯಬೇಕಾಗಿದೆ. ಇದರ ವಾಸ್ತವಾಂಶ ತಿಳಿಯಲು ಕೋರ್ಟ್ ಅವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಹಾಗೂ ಪಾರೆನ್ಸಿಕ್ ತಜ್ಞರಿಂದ ರಕ್ತದ ಮಾದರಿ ಸಂಗ್ರಹಿಸಲು ಸೂಚಿಸಿದ್ದಾರೆ.

9 Shares

Facebook Comments

comments