ಪುಣೆ, ಜನವರಿ 08: ಬಾಲ್ಕನಿಯಲ್ಲಿ ಸಿಲುಕಿದ್ದ ಇಬ್ಬರನ್ನು ಬ್ಲಿಂಕಿಟ್ ಡೆಲಿವರಿ ಏಜೆಂಟ್ ರಕ್ಷಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ.

ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬ್ಲಿಂಕ್ ಇಟ್​ಗೆ ಆರ್ಡರ್ ನೋಟಿಫಿಕೇಷನ್ ಬಂದಿತ್ತು, ಡೆಲಿವರಿ ಏಜೆಂಟ್ ಒಬ್ಬರು ಅದನ್ನು ಡೆಲಿವರಿ ಮಾಡಬೇಕೆಂದು ಬಂದಾಗ ಅಚ್ಚರಿಯೊಂದು ಕಾದಿತ್ತು. ಇಬ್ಬರು ಸ್ನೇಹಿತರು ಬಾಲ್ಕನಿಯಲ್ಲಿ ಲಾಕ್ ಆಗಿದ್ದರು, ಒಳಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಅವರು ಗಾಬರಿಗೊಳ್ಳಲಿಲ್ಲ ಬದಲಾಗಿ, ಬ್ಲಿಂಕ್ ಇಟ್​ನಲ್ಲಿ ಏನಾದರೂ ಆರ್ಡರ್ ಮಾಡುವ ನಿರ್ಧಾರ ಮಾಡಿದರು.

ಡೆಲಿವರಿ ಮಾಡಲು ಬಂದವರ ಬಳಿ ಸಹಾಯ ಕೇಳುವುದು ಅವರ ಪ್ಲ್ಯಾನ್ ಆಗಿತ್ತು. ಮಲಗಿದ್ದ ಪೋಷಕರಿಗೆ ಡಿಸ್ಟರ್ಬ್ ಆಗದಂತೆ ಮುಖ್ಯ ಬಾಗಿಲನ್ನು ತೆರೆಯುವುದು ಹೇಗೆ ಎಂಬುದನ್ನು ಸೂಚಿಸಿದರು. ಈ ಘಟನೆಯನ್ನು ಪುಣೆ ನಿವಾಸಿ ಮಿಹಿರ್ ಗಹುಕರ್ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Share Information