ಬಜ್ಜೆ ಪೊಲೀಸರ ಕಿರುಕುಳಕ್ಕೆ ಖಂಡನೆ : ಎಸಿಪಿ ಕಚೇರಿಗೆ ಮುತ್ತಿಗೆ ಹಾಕಿದ ಲಾರಿ ಮಾಲಿಕರು

ಮಂಗಳೂರು,ಫೆಬ್ರವರಿ 11 : ಸ್ಥಳೀಯ ಪೊಲಿಸರ ಕಿರುಕುಳ ಖಂಡಿಸಿ ದಕ್ಷಿಣ ಕನ್ನಡ ಲಾರಿಮಾಲಿಕರ ಸಂಘಗಳ ಒಕ್ಕೂಟದ ವತಿಯಿಂದ ಭ್ರಷ್ಟ ಜಿಲ್ಲಾಡಳಿತ ಅಧಿಕಾರಿಗಳ ದೌರ್ಜನ್ಯದ ವಿರುದ್ಧ  ಲಾರಿ ಮಾಲಕರು,ಮತ್ತು ಚಾಲಕರು ಪಣಂಬೂರು ಎಸಿಪಿ ಕಚೇರಿಗೆ ಇಂದು ಮುತ್ತಿಗೆ ಹಾಕಿದರು.

ಪೋಲಿಸರ ಅದರಲ್ಲೂ ಬಜ್ಪೆ ಪೊಲೀಸರ ನಡವಳಿಕೆಯನ್ನು ಖಂಡಿಸಿದ ಪ್ರತಿಭಟನಕಾರರು ಲಾರಿಗೆ ಬಲತ್ಕಾರವಾಗಿ ಮರಳು ತುಂಬಿಸಿಕೊಂಡು ಬಜ್ಪೆ ಆರಕ್ಷಕ ಠಾಣೆಯಲ್ಲಿ ಇರಿಸಿಕೊಂಡಿದ್ದಾರೆ.

ಈ ಬಗ್ಗೆ ತನಿಖೆ ಚುರುಕುಗೊಳಿಸಬೇಕು. ಮತ್ತು ತಪ್ಪಿತಸ್ತ ಅಧಿಕಾರಿಗಳ ಮೇಲೆ ಕಾನೂನಿನ ಅಡಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಅನಧಿಕೃತವಾಗಿ ಸಂಶಯದ ಆಧಾರದಲ್ಲಿ ವಶಪಡಿಸಿಕೊಂಡ ಲಾರಿಗಳನ್ನು ಪೊಲೀಸ್ ಠಾಣೆಯಿಂದ ತೆರವುಗೊಳಿಸಬೇಕು. ವಾಹನ ನಿಲುಗಡೆಯಂತಹ ಸಮಸ್ಯೆ ಬಗೆಹರಿಸಬೇಕು.

ವಿನಃ ಕಾರಣ ಎಫ್ ಐ ಆರ್ ನಿಲ್ಲಿಸಬೇಕು.

ಬಜಪೆ ಠಾಣೆಯ ಇನ್ಸ್‌ಪೆಕ್ಟರ್  ಪರಶಿವಮೂರ್ತಿ ವಿರುದ್ಧ ದಾಖಲಾಗಿರುವ ದೂರಿನ ಅಂಶಗಳ ತನಿಖೆಯಾಗಬೇಕು ಎಂದು ಆಗ್ರಹಿಸಿದ ಲಾರಿ ಮಾಲಕರು ಮತ್ತು ಚಾಲಕರು ಎಸಿಪಿಯವರಿಗೆ ಮನವಿ ಸಲ್ಲಿಸಿದರು.

5 Shares

Facebook Comments

comments