Connect with us

LATEST NEWS

ಕಾಂಗ್ರೇಸ್ ಗೆ ತಟ್ಟಿದೆ ಹಿರಿಯ ನಾಯಕ ಜನಾರ್ಧನ ಪೂಜಾರಿ ಅವರ ಶಾಪ – ಸಂಸದ ನಳಿನ್ ಕುಮಾರ್ ಕಟೀಲ್

ಕಾಂಗ್ರೇಸ್ ಗೆ ತಟ್ಟಿದೆ ಹಿರಿಯ ನಾಯಕ ಜನಾರ್ಧನ ಪೂಜಾರಿ ಅವರ ಶಾಪ – ಸಂಸದ ನಳಿನ್ ಕುಮಾರ್ ಕಟೀಲ್

ಮಂಗಳೂರು ನವೆಂಬರ್ 16: ಕಾಂಗ್ರೇಸ್ ಗೆ ಹಿರಿಯ ನೇತಾರ ಬಿ.ಜನಾರ್ಧನ ಪೂಜಾರಿ ಅವರ ಶಾಪ ತಟ್ಟಿದ್ದು, ನನ್ನ ರಾಜಕೀಯ ಗುರುಗಳಾದ ಹಿರಿಯ ನಾಯಕ ಬಿ ಜನಾರ್ದನ ಪೂಜಾರಿ ಅವರನ್ನು ಕಾಂಗ್ರೇಸ್ ನಡೆಸಿಕೊಂಡ ರೀತಿಯಿಂದ ಜನ ಬೇಸತ್ತು ಕಾಂಗ್ರೆಸ್‌ಗೆ ಸರಿಯಾದ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗುಡುಗಿದ್ದಾರೆ.

ಮಂಗಳೂರಿನಲ್ಲಿ ಇಂದು ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ವಿಜಯಶಾಲಿಯಾದ ಬಿಜೆಪಿಯ 44 ಮಂದಿ ಚುನಾಯಿತ ಪ್ರತಿನಿಧಿಗಳಿಗೆ ಭಾರತೀಯ ಜನತಾ ಪಕ್ಷದ ವತಿಯಿಂದ ಅದ್ದೂರಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ನಗರದ ಕದ್ರಿ ಮೈದಾನಿನಲ್ಲಿ ಅಯೋಜಿಸಿದ್ದ ಅದ್ದೂರಿ ಸಮಾರಂಭದಲ್ಲಿ ಜಿಲ್ಲಾ ಹಾಗೂ ರಾಜ್ಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ನೂತನ ಸದಸ್ಯರಿಗೆ ಸನ್ಮಾನಿಸಿ ಗೌರವಿಸಿದರು.

ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರು ಮಹಾ ನಗರ ಪಾಲಿಕಯಲ್ಲಿ ಕಳೆದ 5 ವರ್ಷಗಳಿಂದ ನಡೆಸಿದ್ದ ಕಾಂಗ್ರೆಸ್‌ ದುರಾಡಳಿತಕ್ಕೆ ಜನ ಬೇಸತ್ತು ಬಿಜೆಪಿ ಗೆ ಅಧಿಕಾರ ನೀಡಿದೆ. ಬಿಜೆಪಿ ಅಧಿಕಾರಕ್ಕೆ ಬರಬಾರದೆಂದು ಮೀಸಲಾತಿಯಲ್ಲೂ ಕಾಂಗ್ರೆಸ್ ರಾಜಕೀಯ ಮಾಡಿತು, ಆದರೆ ಮತದಾರರು ಮಾತ್ರ ಬಿಜೆಪಿಯ ಕೈ ಹಿಡಿದರು ಎಂದ ಅವರು ಮುಂದಿನ 5 ವರ್ಷಗಳ ಕಾಲ ಭ್ರಷ್ಟಾಚಾರ ರಹಿತ ಮತ್ತು ಜನ ಸ್ನೇಹಿ ಆಡಳಿತ ನೀಡಿ ಎಂದು ನೂತನ ಸದಸ್ಯರಿಗೆ ಕಿವಿ ಮಾತು ಹೇಳಿದರು.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ,ಮುಲ್ಕಿ-ಮೂಡಬಿದ್ರೆ ಶಾಸಕ ಉಮನಾಥ್ ಕೋಟ್ಯಾನ್, ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಪುತ್ತೂರು ಶಾಸಕರಾದ ಸಂಜೀವ ಮಠಂದೂರು, ಮಾಜಿ ಸಚಿವರಾದ ಕೃಷ್ಣ ಜೆ ಪಾಲೇಮಾರ್, ಎನ್. ಯೋಗೀಶ್ ಭಟ್, ಸಹಿತ ಜಿಲ್ಲೆಯ ಆನೇಕ ಹಿರಿಯ ಕಿರಿಯ ನಾಯಕರು ಉಪಸ್ಥಿತಿರಿದ್ದರು.

Facebook Comments

comments