ಪುತ್ತೂರು ಡಿಸೆಂಬರ್ 24: ರಾಜ್ಯ ಸರಕಾರದ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ ವಿರೋಧಿಸಿ ಪುತ್ತೂರಿನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ.


ಪುತ್ತೂರು ಮಿನಿ ವಿಧಾನಸೌಧ ಮುಂದೆ ಬಿಜೆಪಿ ಪುತ್ತೂರು ಘಟಕದಿಂದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ರಾಜ್ಯ ಕಾಂಗ್ರೇಸ್ ಸರಕಾರದ ವಿರುದ್ಧ ಬಿಜೆಪಿ ರ್ಯಕರ್ತರು ಘೋಷಣೆ ಕೂಗಿದರು. ರಾಜ್ಯ ಸರಕಾರದ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕದಲ್ಲಿ ದ್ವೇಷ ಭಾಷಣ ಪದಕ್ಕೆ ಸ್ಪಷ್ಟ ವ್ಯಾಖ್ಯಾನವಿಲ್ಲ, ಕಾಯ್ದೆ ಜಾರಿಗೆ ಬಂದಲ್ಲಿ ಆಡಳಿತಾರೂಢ ಪಕ್ಷದ ವಿರುದ್ಧ ಮಾತನಾಡುವವರ ಧ್ವನಿ ಅಡಗಿಸುವ ಪ್ರಯತ್ನ ನಡೆಯಲಿದೆ ಎಂದು ಬಿಜೆಪಿ ಮುಖಂಡರ ಆರೋಪಿಸಿದರು.

Share Information