Connect with us

    LATEST NEWS

    ಗೋವಿಗಾಗಿ ಮೇವು ಯಶಸ್ವಿ ಅಭಿಯಾನ

    ಉಡುಪಿ: ಉಡುಪಿಯ ಜಿಲ್ಲಾ ಬಿಜೆಪಿ ಗೋವಿಗಾಗಿ ಮೇವು ಅಭಿಯಾನದ ಮೂಲಕ ಜಿಲ್ಲೆಯ ಗೋಶಾಲೆಗಳಿಗೆ ಹಸಿರು ಹುಲ್ಲನ್ನು ಶ್ರಮದಾನದ ಮೂಲಕ ನೀಡಿದೆ.

    ಈ ತನಕ ಅನೇಕ ವರ್ಷಗಳಿಂದ ದ ಸ್ಥಳೀಯ ಅನೇಕ‌ ಹಿಂದೂ ಸಂಘಟನೆಗಳು , ಬ್ರಾಹ್ಮಣ ವಲಯ ಸಮಿತಿಗಳು , ಯುವಕ ಮಂಡಲಗಳು , ಭಜನಾ ತಂಡಗಳು ಹಾಗೂ ಇನ್ನಿತರೆ ಅನೇಕ ಸೇವಾ ಸಂಸ್ಥೆಗಳು ಮಳೆಗಾಲದಲ್ಲಿ ತಮ್ಮೂರಿನ ರಸ್ತೆಯ ಇಕ್ಕೆಲಗಳಲ್ಲಿ ಹುಲುಸಾಗಿ ಬೆಳೆದ ಹಸಿರು ಹುಲ್ಲನ್ನು ಶ್ರಮದಾನದ ಮೂಲಕ ಇಲ್ಲಿನ ನೀಲಾವರ ಕೊಡವೂರು‌ , ಗೋಪಾಡಿಯೇ ಮೊದಲಾದ ಕಡೆಗಳಲ್ಲಿರುವ ಗೋಶಾಲೆಗಳಿಗೆ ತಂದೊಪ್ಪಿಸಿ ಗೋರಕ್ಷಣೆಯ ಕಾರ್ಯಕ್ಕೆ ಕೈಜೋಡಿಸುತ್ತಿದ್ದರು .

    ಈ ವರ್ಷವೂ ಆ ಸಂಸ್ಥೆಗಳು ಇಂಥಹ ಶ್ತಮದಾನ ಮಾಡಿ ಹುಲ್ಲು ತಂದೊಪ್ಪಿಸಿದ್ದಾರೆ .ಆದರೆ ಈ ಬಾರಿ ಕೊರೊನಾ ಮತ್ತು ವಿಪರೀತ ಮಳೆಯ ಕಾರಣದಿಂದ ಗೋಶಾಲೆಗಳಲ್ಲಿ ಯಥೇಚ್ಛ ಮೇವಿನ‌ ಸಂಗ್ರಹ ಕಷ್ಟವಾಗಿತ್ತು . ಈ ಹಿನ್ನೆಲೆಯಲ್ಲಿ ಪೂಜ್ಯ ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಾಮಾಜಿಕ ಜಾಲತಾಣಗಳು ಹಾಗೂ ಪತ್ರಿಕೆ ಮಾಧ್ಯಮಗಳ ಮೂಲಕ ಹಸಿರು ಹುಲ್ಲನ್ನು ಕತ್ತರಿಸಿ ಗೋಶಾಲೆಗಳಿಗೆ ಒದಗಿಸಿ ಸಹಕರಿಸಬೇಕೆಂದು ವಿನಂತಿ ಮಾಡಿದ್ದರು . ಅದೇ ರೀತಿ ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀ ಕೆ ಸುರೇಶ್ ನಾಯಕ್ ಅವರಿಗೂ ಮನವಿ ಮಾಡಿ ಪಕ್ಷದ ಯುವಮೋರ್ಚಾ ಕಾರ್ಯಕರ್ತರ ಮೂಲಕ ಒಂದಷ್ಟು ಶ್ರಮದಾನ ನಡೆಸಿ ಹುಲ್ಲು ಒದಗಿಸಲು ಪ್ರಯತ್ನಿಸಬೇಕು ಎಂದಿದ್ದರು .

    ಶ್ರೀಗಳವರ ಈ ಸಲಹೆಯನ್ನು ಪ್ರೀತಿ ಗೌರವದಿಂದಲೇ ಸ್ವೀಕರಿಸಿದ ಶ್ರೀ ಸುರೇಶ್ ನಾಯಕ್ ಅವರು ಕೇವಲ ಯುವಮೋರ್ಚಾ ಮಾತ್ರವಲ್ಲದೇ ಪಕ್ಷದ ಎಲ್ಲಾ ಎಂಟು – ಒಂಭತ್ತು ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೂ ಈ ಸೂಚನೆ ನೀಡಿ ಸರಣಿ ಶ್ರಮದಾನಗಳ ಮೂಲಕ ಹುಲ್ಲು ಒಪ್ಪಿಸುವುದಾಗಿ ಭರವಸೆ ನೀಡಿದರು .

    ಇದು ಕೇವಲ ಭರವಸೆ ಮಾತ್ರವಾಗದೇ ಜಿಲ್ಲಾ ಬಿಜೆಪಿಯ ಮಹಿಳಾ ಮೋರ್ಚಾ ರೈತ ಮೋರ್ಚಾ , ಕಾರ್ಮಿಕ ಮೋರ್ಚಾ ಯುವ ಮೋರ್ಚಾ , ಹಿಂದುಳಿದ ವರ್ಗಗಳ ಮೋರ್ಚಾ , ಎಸ್ ಸಿ ಎಸ್ ಟಿ ಮೋರ್ಚಾ ಗ್ರಾಮಾಂತರ ಬಿಜೆಪಿ ಘಟಕ ಹೀಗೆ ಎಲ್ಲಾ ಮೋರ್ಚಾಗಳ ಸ್ಥಳೀಯ ಮಟ್ಟದ ಕಾರ್ಯಕರ್ತರ ತಂಡಗಳು ಜಿಲ್ಲಾಧ್ಯಕ್ಷರ ಸೂಚನೆಯನ್ನು ಸ್ವೀಕರಿಸಿ ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ನಿರಂತರ ಸರಣಿ ಶ್ರಮದಾನಗಳ ಮೂಲಕ ನೀಲಾವರ ಕೊಡವೂರು , ಗೋಪಾಡಿಯ ಗೋಶಾಲೆಗಳಿಗೆ ಹಸಿರು ಹುಲ್ಲನ್ನು ನೀಡುತ್ತಿರುವುದು ಸಾರ್ವಜನಿಕರ ಅಪಾರ ಪ್ರಶಂಸೆಗೆ ಪಾತ್ರವಾಗಿದೆ .

    ಗೋವಿಗಾಗಿ ಮೇವು ಸರಣಿ ಗೋಗ್ರಾಸ ಸಮರ್ಪಣಾ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಸುತ್ತಿರುವುದಕ್ಕೆ ಪೂಜ್ಯ ಪೇಜಾವರ ಶ್ರೀಗಳು ಅತ್ಯಂತ ಸಂತೋಷಗೊಂಡಿದ್ದು , ಇದರಲ್ಲಿ ಭಾಗಿಗಳಾಗಿರುವ ಎಲ್ಲ ಸಂಘ ಸಂಸ್ಥೆಗಳು , ಜಿಲ್ಲಾ ಬಿಜೆಪಿಯ ಎಲ್ಲ ಮೋರ್ಚಾಗಳ ಮುಖಂಡರು ಕಾರ್ಯಕರ್ತರುಗಳನ್ನು ಅಭಿನಂದಿಸಿದ್ದು ಅವರೆಲ್ಲರಿಗೂ ಶ್ರೀ ಗೋಪಾಲಕೃಷ್ಣ ಶ್ರೀ ಮುಖ್ಯಪ್ರಾಣ ದೇವರು ವಿಶೇಷವಾಗಿ ಅನುಗ್ರಹಿಸಲಿ ಎಂದು ಪ್ರಾರ್ಥಿಸಿದ್ದಾರೆ .

    ಪ್ರಾಯಃ ಇದೇ ಪ್ರಥಮ ಬಾರಿಗೆ ರಾಜ್ಯದ ರಾಜಕೀಯ ಪಕ್ಷವೊಂದರ ಜಿಲ್ಲಾ ಘಟಕದ ಮೂಲಕ ಗೋರಕ್ಷಣೆಯ ಕಾರ್ಯಕ್ಕೆ ಇಂಥಹ ಬೆಂಬಲ ದೊಡ್ಡ ಮಟ್ಟದಲ್ಲಿ ನಡೆದಿದ್ದು ಇದಕ್ಕಾಗಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಕೆ ಸುರೇಶ್ ನಾಯಕ್ ಅವರನ್ನೂ ಶ್ರೀಗಳು ಅಭಿನಂದಿಸಿ , ಅವರ ನೇತೃತ್ವದಲ್ಲಿ ಇಂಥಹ ಸಮಾಜಮುಖಿ ಕಾರ್ಯಗಳು ಮತ್ತಷ್ಟು ನಡೆಯುವಂತಾಗಲಿ ಅವರಿಗೆ ಶ್ರೀ ಕೃಷ್ಣನು ಉಜ್ವಲ ಯಶಸ್ಸನ್ನು ಕರುಣಿಸಲಿ ಎಂದು ಆಶೀರ್ವದಿಸಿದ್ದಾರೆ .

    Video:

    Share Information
    Advertisement
    Click to comment

    You must be logged in to post a comment Login

    Leave a Reply