Connect with us

    LATEST NEWS

    ಪಟಾಕಿ ಹೊಡೆಯುವಾಗ ಬೆಂಕಿ ತಗುಲಿ ಬಿಜೆಪಿ ಸಂಸದೆಯ ಮೊಮ್ಮಗಳ ಸಾವು

    ಉತ್ತರ ಪ್ರದೇಶ: ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರ 8 ವರ್ಷದ ಮೊಮ್ಮಗಳು ಪಟಾಕಿಯ ಬೆಂಕಿ ತಗುಲಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.


    ರೀಟಾ ಬಹುಗುಣ ಜೋಶಿ, ಪ್ರಯಾಗ್‌ರಾಜ್‌ ಕ್ಷೇತ್ರದ ಸಂಸದೆಯಾಗಿದ್ದು, ರೀಟಾ ಬಹುಗುಣ ಅವರ ಮಗ ಮಯಾಂಕ್ ಜೋಶಿಯವರ ಮಗಳು ಈ ಅವಘಡದಲ್ಲಿ ಮೃತಪಟ್ಟಿದ್ದಾಳೆ. ರೀಟಾ ಬಹುಗುಣ ಅವರ ಮೊಮ್ಮಗಳು ಮನೆಯ ಟೆರೇಸ್‌ನಲ್ಲಿ ಆಟವಾಡುವಾಗ ಬಟ್ಟೆಗೆ ಬೆಂಕಿ ತಗುಲಿತ್ತು. ಬೆಂಕಿ ತಗುಲಿದ ಕೂಡಲೇ ಬಾಲಕಿ ಕಿರುಚಾಡಿದ್ದಾಳೆ. ಆದರೆ ಪಟಾಕಿ ಸದ್ದಿನಲ್ಲಿ ಬಾಲಕಿಯ ಕಿರುಚಾಟ ಯಾರಿಗೂ ಕೇಳಿಸಿರಲಿಲ್ಲ.

    ಹೀಗಾಗಿ ಈ ಬೆಂಕಿ ಅವಘಡದಲ್ಲಿ ಬಾಲಕಿಗೆ ಶೇಕಡಾ 60 ರಷ್ಟು ಸುಟ್ಟಗಾಯಗಳಾಗಿದ್ದವು. ಕೂಡಲೇ ಬಾಲಕಿಯನ್ನು ಏರ್ ‌ಆ್ಯಂಬುಲೆನ್ಸ್‌ನಲ್ಲಿ ದೆಹಲಿಯ ಏಮ್ಸ್‌ಗೆ ಶಿಫ್ಟ್ ಮಾಡಿದ್ದಾರೆ. ಆದರೆ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ.

    Share Information
    Advertisement
    Click to comment

    You must be logged in to post a comment Login

    Leave a Reply