LATEST NEWS
ಬಿಜೆಪಿ ಕಛೇರಿಗೆ ಮುತ್ತಿಗೆ ಹಾಕುವ ಬೆದರಿಕೆ ಹಾಕಿದ ಕಾಂಗ್ರೇಸಿಗರು ಬಾಲಮುದುರಿ ಪಲಾಯನ – ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ
ಮಂಗಳೂರು ಅಗಸ್ಟ್ 23: ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಹೊರಟಿದ್ದ ಕಾಂಗ್ರೇಸ್ ನ ಮುಖಂಡರಾದ ಐವನ್ ಹಾಗೂ ಇವರ ಪಟಾಲಂ ಬಿಜೆಪಿ ಕಛೇರಿ ಇರುವ ಪ್ರದೇಶದ ಹತ್ತಿರವು ಸುಳಿಯದೇ ಬಾಲ ಮುದುರಿಕೊಂಡು ಪಲಾಯನ ಗೈದಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಲೇವಡಿ ಮಾಡಿದ್ದಾರೆ.
ಬಿಜೆರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಹೇಳಿದ್ದ ಕಾಂಗ್ರೇಸ್ ಕಾರ್ಯಕರ್ತರ ಪ್ರತಿಭಟನೆ ಹಿನ್ನಲೆ ಬಿಜೆಪಿ ಕಚೇರಿಯಲ್ಲಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಬಾಂಗ್ಲಾದೇಶದ ಮಾದರಿಯಲ್ಲಿ ರಾಜಭವನಕ್ಕೆ ನುಗ್ಗಿ ಅರಾಜಕತೆ ಸೃಷ್ಟಿಸಿ ಕರುನಾಡನ್ನು ಪ್ರಕ್ಷುಬ್ಧ ಮಾಡಲು ಕುಮ್ಮಕ್ಕು ನೀಡಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮನೆಗೆ ಯಾರೋ ಅಪರಿಚಿತ ವ್ಯಕ್ತಿಗಳು ಕಲ್ಲೆಸದದ್ದನ್ನೇ ನೆಪಮಾಡಿ ಬಾಂಗ್ಲಾದೇಶ ಮಾದರಿಯನ್ನು ಮಂಗಳೂರಿನಲ್ಲಿ ಮಾಡಿ ತೋರಿಸಲು ಮುಂದಾಗಿದ್ದು, ಮಂಗಳೂರಿನ ಬಿಜೆಪಿ ಕಛೇರಿಗೆ ಮುತ್ತಿಗೆ ಹಾಕಿ ಕಾಂಗ್ರೇಸ್ ಗೂಂಡಾ ಕಾರ್ಯಕರ್ತರನ್ನು ನುಗ್ಗಿಸಲು ಕರೆ ನೀಡಿದ ಕಾಂಗ್ರೇಸ್ ವಿರುದ್ದ ಬೆಳಗ್ಗಿನಿಂದ ತೊಡೆ ತಟ್ಟಿ ನಿಂತ ಬಿಜೆಪಿ ಕಾರ್ಯಕರ್ತರು ಬಿಜೆಪಿ ಕಛೇರಿ ಎದರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಹಾಗೂ ಈ ಕಾಂಗ್ರೇಸ್ ಗೂಂಡಾ ಕಾರ್ಯಕರ್ತರನ್ನು ಎದುರಿಸಲು ಮಹಿಳೆಯರು ಯುವಕರು ಬಿಜೆಪಿ ಶಾಸಕರು ಹಾಗೂ ಮುಖಂಡರು ಸಜ್ಜಾಗಿದ್ದರು. ಆದರೆ ಬಿಜೆಪಿ ಕಛೇರಿಗೆ ದಾಳಿ ಮಾಡುವ ಹೇಳಿಕೆ ಕೊಡೋವಾಗ ಇದ್ದ ಹುರುಪು, ಅದನ್ನು ಕಾರ್ಯಗತ ಮಾಡುವಲ್ಲಿ ಕಾಂಗ್ರೇಸ್ಸಿಗರು ಮುಗ್ಗರಿಸಿ ಬಿದ್ದು, ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸು ಹಾಗೂ ವಿರೋಧವನ್ನು ಅರಿತುಕೊಂಡ ಕಾಂಗ್ರೇಸ್ ನ ಮುಖಂಡರಾದ ಐವನ್ ಹಾಗೂ ಇವರ ಪಟಾಲಂ ಬಿಜೆಪಿ ಕಛೇರಿ ಇರುವ ಪ್ರದೇಶದ ಹತ್ತಿರವು ಸುಳಿಯದೇ ಬಾಲ ಮುದುರಿಕೊಂಡು ಪಲಾಯನ ಗೈದ ವಿಚಾರವನ್ನು ಸೇರಿದ್ದ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ತಿಳಿಸಿದರು.
You must be logged in to post a comment Login