Connect with us

    DAKSHINA KANNADA

    ಬಿಜೆಪಿ ತೆಕ್ಕೆಗೆ ಮಂಗಳೂರು ಮಹಾನಗರ ಪಾಲಿಕೆ

    ಬಿಜೆಪಿ ತೆಕ್ಕೆಗೆ ಮಂಗಳೂರು ಮಹಾನಗರ ಪಾಲಿಕೆ

    ಮಂಗಳೂರು, ನವಂಬರ್ 14: ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ಪಾಲಾಗಿದೆ.

    60 ವಾರ್ಡ್ ಗಳನ್ನು ಒಳಗೊಂಡಿರುವ ಮಂಗಳೂರು ಮಹಾನಗರ ಪಾಲಿಕೆಯಲ್ಲಿ 44 ಸ್ಥಾನದಲ್ಲಿ  ಜಯಭೇರಿ ಬಾರಿಸುವ ಮೂಲಕ ಬಿಜೆಪಿ ಕಾಂಗ್ರೇಸ್ ಪಕ್ಷದಿಂದ ಈ ಬಾರಿ ಅಧಿಕಾರವನ್ನು ಕಸಿದುಕೊಂಡಿದೆ.

    ಕಾಂಗ್ರೇಸ್ ಪಕ್ಷದ ವಶದಲ್ಲಿದ್ದ ಮಂಗಳೂರು ಮಹಾನಗರ ಪಾಲಿಕೆ ಇದೀಗ ಬಿಜೆಪಿ ಪಕ್ಷದ ವಶವಾಗಿದ್ದು, ಪಕ್ಷದ ಅಭೂತಪೂರ್ವ ಗೆಲುವಿಗೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.

    ಪ್ರಮುಖವಾಗಿ ಕುಳಾಯಿ ವಾರ್ಡ್ ನಲ್ಲಿ ಕಳೆದ ಹಲವು ವರ್ಷಗಳಿಂದ ಗೆಲುವಿನ ನಗೆ ಬೀರಿದ್ದ ಪ್ರತಿಭಾ ಕುಳಾಯಿ ಗೆ ಈ ಬಾರಿ ಸೋಲಾಗಿದೆ.

     

    ಬಿಜೆಪಿ ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದು, ಹೆಚ್ಚಿನ ಕಡೆಗಳಲ್ಲಿ ಗೆಲುವಿನ ನಗೆ ಬೀರಿದೆ.

    ಉಳಿದಂತೆ ಕಾಂಗ್ರೇಸ್ ಪಕ್ಷದ 14 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, 2 ಸ್ಥಾನಗಳು ಇತರರ ಪಾಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply