ಪುತ್ತೂರು ಅಕ್ಟೋಬರ್ 30: ಮದುವೆಗೆ ಹೊರಟಿದ್ದ ಮಿನಿಬಸ್ ಬಿಸಿಲೆ ಘಾಟ್ ನ ತಿರುವುವೊಂದರಲ್ಲಿ ಪಲ್ಟಿಯಾದ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ.

ಮೃತರನ್ನು ಸಕಲೇಶಪುರದ ಒಣಗೂರು ನಿವಾಸಿ ಶಿವರಾಜ್ (58) ಎಂದು ಗುರುತಿಸಲಾಗಿದೆ. ವಣಗೂರಿನಿಂದ ಕುಕ್ಕೆ ಸುಬ್ರಮಣ್ಯಕ್ಕೆ ಮದುವೆಗೆ ಹೊರಟಿದ್ದ 30 ಜನರಿದ್ದ ವ್ಯಾನ್ ಬಿಸ್ಲೆ ಘಾಟ್ ಡಬಲ್ ಟರ್ನ್ ನಲ್ಲಿ 20 ಅಡಿ ಎತ್ತರದಿಂದ ಮಗುಚಿ ಬಿದಿದ್ದು 20ಕ್ಕೂ ಅಧಿಕ ಮಂದಿಗೆ ಗಾಯಗಳಾಗಿತ್ತು, ಅದರಲ್ಲಿ ನಾಲ್ವರಿಗೆ ಗಂಭೀರಗಾಯಗಳಾಗಿತ್ತು. ಇದೀಗ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓರ್ವ ಗಾಯಾಳು ಸಾವನಪ್ಪಿದ್ದಾರೆ.
ಅಪಘಾತದಲ್ಲಿ ಸಣ್ಣಪುಟ್ಟ ಗಾಯಗೊಂಡಿದ್ದ ಹಲವರು ಮಂಗಳೂರು ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.