ಚಂಡಿಗಢ,ಫೆಬ್ರವರಿ 15:ಪಂಜಾಬಿ ನಟಿ ಮತ್ತು ಗಾಯಕಿ, ʼಬಿಗ್ ಬಾಸ್ 13ʼ ರ ಮೂಲಕ ಖ್ಯಾತಿ ಪಡೆದ ಹಿಮಾಂಶಿ ಖುರಾನಾಗೆ ಬಿಷ್ಣೋಯ್ ಗ್ಯಾಂಗ್ ನಿಂದ ಜೀವ ಬೆದರಿಕೆ ಸಂದೇಶವೊಂದು ಬಂದಿದೆ ಎಂದು ಹೇಳಲಾಗುತ್ತಿದೆ.

ಈಕೆಗೆ ಬಿಷ್ಣೋಯ್ ಗ್ಯಾಂಗ್ ನ ಹ್ಯಾರಿ ಬಾಕ್ಸರ್ ಜೀವ ಬೆದರಿಕೆಯನ್ನು ಹಾಕಿ 10 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವ ಮಾಹಿತಿ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ನಟಿ ಹಿಮಾಂಶಿ ದೂರು ದಾಖಲಿಸಿದ್ದು ಮೊಹಾಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇತ್ತ ಕಳೆದ ಹಲವು ದಿನಗಳಿಂದ ಬಾಲಿವುಡ್ ನ ನಟ,ನಟಿಯರನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಡ್ತಾ ಇರುವುದು ಬಿಷ್ಣೋಯ್ ಗ್ಯಾಂಗ್ ನವರ..? ಅಥವಾ ಇದರ ಹಿಂದೆ ಬೇರೆ ಯಾರಾದ್ರೂ ಇದ್ದಾರಾ..? ಅನ್ನುವುದರ ಬಗ್ಗೆ ಚರ್ಚೆಯಾಗುತ್ತಿದ್ದು ಕಲಾವಿದರ ನಿದ್ದೆಗೆಡಿಸಿದೆ.
ಯಾಕಂದ್ರೆ ಹಿಮಾಂಶಿ ಖುರಾನಾಗೆ ಬೆದರಿಕೆ ಹಾಕುವುದಕ್ಕೆ ಮುಂಚೆ ಬಿಷ್ಣೋಯ್ ಗ್ಯಾಂಗ್ ಎಂದು ಹೇಳಿಕೊಳ್ಳುತ್ತಿರುವ ಈ ಗ್ಯಾಂಗ್ ನಿರ್ದೇಶಕ ರೋಹಿತ್ ಶೆಟ್ಟಿ, ನಟ ರಣ್ಣೀರ್ ಸಿಂಗ್, ಸಲ್ಮಾನ್ ಖಾನ್ ಬಾಮೈದ ಆಯುಷ್ ಗೆ ಬೆದರಿಕೆ ಹಾಕಿದೆ.