Connect with us

    LATEST NEWS

    BIS ರಾಷ್ಟ್ರೀಯ ಗವರ್ನಿಂಗ್ ಬೋರ್ಡ್ ಕೌನ್ಸಿಲ್ ಸದಸ್ಯರಾಗಿ ಯು.ಟಿ ಖಾದರ್ ಆಯ್ಕೆ

    BIS ರಾಷ್ಟ್ರೀಯ ಗವರ್ನಿಂಗ್ ಬೋರ್ಡ್ ಕೌನ್ಸಿಲ್ ಸದಸ್ಯರಾಗಿ ಯು.ಟಿ ಖಾದರ್ ಆಯ್ಕೆ

    ಮಂಗಳೂರು ನವೆಂಬರ್ 21: ರಾಷ್ಟ್ರ ಮಟ್ಟದ ಗುಣಮಟ್ಟ ಮಾಪನ ಸಂಸ್ಥೆ ಪ್ರತಿಷ್ಠಿತ BIS (Beauro of Indian Standard) ರಾಷ್ಟ್ರೀಯ ಗವರ್ನಿಂಗ್ ಬೋರ್ಡ್ ಕೌನ್ಸಿಲ್ ಸದಸ್ಯರಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ.ಖಾದರ್ ಅವರನ್ನು ಕೇಂದ್ರ ಸರಕಾರ ನೇಮಿಸಿ ಆದೇಶ ಹೊರಡಿಸಿದೆ.

    ರಾಷ್ಟ್ರಮಟ್ಟದಲ್ಲಿ ಅಧ್ಯಕ್ಷರು ಸೇರಿ ಒಟ್ಟು 6 ಮಂದಿ ಸದಸ್ಯರಿರುವ ಬಿಐಎಸ್ ಸಂಸ್ಥೆಗೆ ದಕ್ಷಿಣ ಭಾರತದಿಂದ ಯು.ಟಿ.ಖಾದರ್ ನೇಮಕರಾಗಿದ್ದಾರೆ. ಕೇಂದ್ರ ಆಹಾರ ಸಚಿವರು ಇದರ ಅಧ್ಯಕ್ಷರಾಗಿದ್ದು, ಉಳಿದಂತೆ ಉತ್ತರ ಭಾರತದ ಮೂವರು ಸಚಿವರು, ಇಬ್ಬರು ಉನ್ನತ ಅಧಿಕಾರಿಗಳು ಸೇರಿದಂತೆ ಒಟ್ಟು ಐವರನ್ನು ಕೇಂದ್ರ ಸರಕಾರ ಆರಿಸಿದೆ.

    ಆರೋಗ್ಯ ಇಲಾಖೆಯಂತೆ ಆಹಾರ ಇಲಾಖೆಯಲ್ಲೂ ಕರ್ನಾಟಕದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಅಮೂಲಾಗ್ರ ಬದಲಾವಣೆ ತಂದ ಸಚಿವ ಯು.ಟಿ.ಖಾದರ್ ಅವರ ಆಯ್ಕೆ ರಾಜ್ಯಕ್ಕೆ, ಕರಾವಳಿ ಜಿಲ್ಲೆಗೆ ಹಾಗೂ ಮಂಗಳೂರು ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ. ಅದು ಕೂಡಾ ಕೇಂದ್ರದ ಬಿಜೆಪಿ ಸರಕಾರ ರಾಜ್ಯ ಕಾಂಗ್ರೆಸ್ ಸರಕಾರದ ಸಚಿವರನ್ನು ಆಯ್ಕೆ ಮಾಡಬೇಕಾದರೆ ಕರ್ನಾಟಕ ಆಹಾರ ಇಲಾಖೆಯ ಕಾರ್ಯವೈಖರಿ ಮತ್ತು ಜನಪ್ರಿಯತೆ ರಾಷ್ಟ್ರಮಟ್ಟದಲ್ಲಿ ಮಾದರಿಯಾಗಿದೆ ಎನ್ನುವುದಕ್ಕೆ ಉದಾಹರಣೆ.

    Share Information
    Advertisement
    Click to comment

    You must be logged in to post a comment Login

    Leave a Reply