ಯಕ್ಷಗಾನ ವೇಷಧಾರಿಗಳೊಂದಿಗೆ ಹೆಜ್ಜೆ ಮೂಲಕ ವಧುವರರ ಎಂಟ್ರಿ ವೈರಲ್ ಆದ ವಿಡಿಯೋ

ಉಡುಪಿ ಮೇ 9: ಯಕ್ಷಗಾನದ ವೇಷಧಾರಿಗಳೊಂದಿಗೆ ಮದುವೆ ಮನೆಗೆ ಆಗಮಿಸಿದ ವಧುವರರ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉಡುಪಿಯ ಶೇಷ ಶಯನ ಹಾಲ್ ನಲ್ಲಿ ನಡೆದ ಮದುವೆ ಕಾರ್ಯಕ್ರಮದದ ವಿಡಿಯೋ ತುಣುಕು ಇದಾಗಿದೆ. ಮದುವೆ ಮನೆಗೆ ಹುಡುಗ ಹುಡುಗಿ ಪ್ರವೇಶಕ್ಕೆ ವಿಶೇಷವಾದ ಟಚ್ ನ್ನು ನೀಡಲಾಗಿದ್ದು, ಮಾಮೂಲಿಯಾಗಿ ವಾದ್ಯದವರ ಜೊತೆ ಆಗಮಿಸಬೇಕಾಗಿದ್ದ ವಧುವರರು ಈ ಬಾರಿ ಬಡಗು ತಿಟ್ಟು ವೇಷಧಾರಿಗಳ ಜೊತೆ ವಧು ವರ ಆಗಮಿಸಿದ್ದಾರೆ.

ಅಲ್ಲದೆ ಚೆಂಡೆಯ ನಾದಕ್ಕೆ ತಕ್ಕಂತೆ ಶಾಸ್ತ್ರೀಯ ಯಕ್ಷಗಾನದ ಸ್ಟೆಪ್ ಹಾಕಿ ವರನ ಜೊತೆ ವಧು ಸಾಗಿದ್ದಾಳೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ.

ಈ ನಡುವೆ ಒಂದೆಡೆ ಇದು ತಮಾಷೆಯಾಗಿ ಕಾಣುವ ವಿಡಿಯೋ ವಿರುದ್ದ ಯಕ್ಷಗಾನ ಪ್ರೇಮಿಗಳು ಗರಂ ಆಗಿದ್ದಾರೆ. ಯಕ್ಷಗಾನಕ್ಕೆ ತನ್ನದೇ ಆದ ಒಂದು ವಿಶೇಷವಾದ ಸ್ಥಾನಮಾನ ಇದ್ದು, ಈ ರೀತಿಯ ಸಮಾರಂಭಗಳಿಗೆ ಬಳಸುವ ಯಕ್ಷಗಾನಕ್ಕೆ ಅವಮಾನ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

VIDEO