ಬಂಟ್ವಾಳ,ಎಪ್ರಿಲ್ 16: ಗೂಡ್ಸ್ ರಿಕ್ಷಾ ಮತ್ತು ಬೈಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವನಪ್ಪಿದ ಘಟನೆ ಕುಕ್ಕಾಜೆ ಎಂಬಲ್ಲಿ ಸಂಭವಿಸಿದೆ. ಮೃತರನ್ನು ಕುಕ್ಕಾಜೆಯ ಪಂಜಾಜೆ ನಿವಾಸಿ ಮನೀಶ್ ( 23) ಎಂದು ಗುರುತಿಸಲಾಗಿದೆ.

ಮೆಲ್ಕಾರ್ ಕಡೆಯಿಂದ ಸ್ನೇಹಿತ ಉದಯ ಎಂಬವರ ಜೊತೆ ಕುಕ್ಕಾಜೆ ಮನೆಯ ಕಡೆ ಸಂಚಾರ ಮಾಡುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸಹಸವಾರನಾಗಿದ್ದ ಮನೀಶ್ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸವಾರ ಉದಯ ಅವರು ಅಲ್ಪಸ್ವಲ್ಪ ಗಾಯಗಳಿಂದ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.