DAKSHINA KANNADA
ಕಡಬ ಪೇಟೆಯಲ್ಲಿ ಪರಸ್ಪರ ಗುದ್ದಾಡಿದ ಸ್ಕೂಟರ್ ಬೈಕ್‌ಗಳು..!!
ಎರಡು ದ್ವಿ ಚಕ್ರ ವಾಹನಗಳು ಪರಸ್ಪರ ಗುದ್ದಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ (Kadaba) ಪೇಟೆ ಯಲ್ಲಿ ಗುರುವಾರ ಅಪರಾಹ್ನ ನಡೆದಿದೆ. ಅಪಘಾತ ದಲ್ಲಿ ಸ್ಕೂಟರ್ ಸವಾರನಿಗೆ ಗಂಭಿರ ಸ್ವರೂಪದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಡಬ : ಎರಡು ದ್ವಿ ಚಕ್ರ ವಾಹನಗಳು ಪರಸ್ಪರ ಗುದ್ದಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ(Kadaba) ಪೇಟೆ ಯಲ್ಲಿ ಗುರುವಾರ ಅಪರಾಹ್ನ ನಡೆದಿದೆ. ಅಪಘಾತದಲ್ಲಿ ಸ್ಕೂಟರ್ ಸವಾರನಿಗೆ ಗಂಭಿರ ಸ್ವರೂಪದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಕೂಟರ್ ಸವಾರ ಕಳಾರ ಸಮೀಪದ ಕೋಡಿ ವಾಸು ಎಂಬವರು ಗಾಯಗೊಂಡು ಆಸ್ಪತ್ರೆ ದಾಖಲಾದವರಾಗಿದ್ದಾರೆ. ಅಂಚೆ ಕಚೇರಿ ಬಳಿಯ ಆಟೋ ನಿಲ್ದಾಣದ ಮುಂಭಾಗ ಈ ಅಪಘಾತ ನಡೆದಿದ್ದು ಕಡಬದಿಂದ ಕಳಾರದತ್ತ ಹೋಗುತ್ತಿದ್ದ ಸ್ಕೂಟಿ ಸವಾರ ಮತ್ತು ಕಡಬದತ್ತ ಬರುತ್ತಿದ್ದ ಬೈಕ್ ನಡುವೆ ಅಪಘಾತವಾಗಿದೆ. ಬೈಕ್ ಸವಾರ ನಿವೃತ್ತ ಯೋಧರಾಗಿದ್ದು ಅಲ್ಪ ಪ್ರಮಾಣದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.