ಬೆಳ್ಮಣ್ ಬಳಿ ಬೈಕ್ ಅಪಘಾತ ಸವಾರ ಸಾವು

ಕಾರ್ಕಳ ಮೇ 28: ಬೆಳ್ಮಣ್- ಶಿರ್ವ ರಸ್ತೆಯ ಜಂತ್ರ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತ ಬೈಕ್ ಸವಾರ ಕಾರ್ಕಳ ಪಳ್ಳಿ ನಿವಾಸಿ ದಿನೇಶ್ ಆಚಾರ್ಯ(38) ಎಂದು ಗುರುತಿಸಲಾಗಿದೆ. ಬೆಳ್ಮಣ್ಣ ಶಿರ್ವರಸ್ತೆಯಲ್ಲಿ ಮೃತ ಬೈಕ್ ಸವಾರ ಬಸ್ ಒಂದನ್ನು ಒವರ್ ಟೇಕ್ ಮಾಡಲು ಹೋಗಿ ಎದುರಿಗೆ ಬಂದ ಇನ್ನೊಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಮೃತ ಬೈಕ್ ಸವಾರ ರಸ್ತೆಗೆ ಎಸೆಯಲ್ಪಿಟ್ಟಿದ್ದು, ಹಿಂದೆ ಇಂದ ಬರುತ್ತಿದ್ದ ಬಸ್ ನ ಚಕ್ರ ಇತನ ತಲೆ ಮೇಲೆ ಹೋಗಿದ್ದು , ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಮತ್ತೊಬ್ಬ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು.

Facebook Comments

comments