Connect with us

    DAKSHINA KANNADA

    ರಸ್ತೆ ದಾಟುವಾಗ ಬೈಕ್ ಡಿಕ್ಕಿ – 6 ವರ್ಷದ ಬಾಲಕಿ ಸಾವು….!!

    ಸುಳ್ಯ ಸೆಪ್ಟೆಂಬರ್ 10 : ಮದರಸದಿಂದ ತರಗತಿ ಮುಗಿಸಿಕೊಂಡು ಮನೆಗೆ ಬರಲು ರಸ್ತೆ ದಾಟುತ್ತಿದ್ದಾಗ ಬೈಕ್ ಢಿಕ್ಕಿಯಾದ ಪರಿಣಾಮ ಬಾಲಕಿಯೊಬ್ಬಳು ಸಾವನಪ್ಪಿರುವ ಘಟನೆ ಘಟನೆ ಸುಳ್ಯ ತಾಲೂಕು ಅರಂಬೂರು ಸಮೀಪದ ಪಾಲಡ್ಕ ಎಂಬಲ್ಲಿ ವರದಿಯಾಗಿದೆ.
    ಪಾಲಡ್ಕ ನಿವಾಸಿ ರಶೀದ್ ಎಂಬವರ ಪುತ್ರಿ ಆಯಿಷಾ ರಿಫಾ (6 )ಮೃತಪಟ್ಟ ಬಾಲಕಿ ಎಂದು ತಿಳಿದು ಬಂದಿದೆ.


    ಇಂದು ಬೆಳಗ್ಗೆ ಮದರಸದಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದಾಗ ಅರಂತೋಡು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಬೈಕೊಂದು ಬಾಲಕಿಗೆ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ. ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತಾದರೂ ಬಾಲಕಿ ಮೃತಟ್ಟಿರುವುದಾಗಿ ತಿಳಿದು ಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply