Connect with us

    LATEST NEWS

    ಬಿಕರ್ನಕಟ್ಟೆ – ಡಿವೈಡರ್ ಗೆ ಡಿಕ್ಕಿ ಹೊಡೆದ ಬೈಕ್ ಇಬ್ಬರು ಗಂಭೀರ

    ಮಂಗಳೂರು ಮೇ 30: ನಿಯಂತ್ರಣತಪ್ಪಿ ಬೈಕ್ ಒಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬಿಕರ್ನಕಟ್ಟೆಯಲ್ಲಿ ನಡೆದಿದೆ.


    ಗಾಯಗೊಂಡವರನ್ನು ಧೀರಜ್‌ ಹಾಗೂ ಗಣೇಶ್‌ ಎಂದು ಗುರುತಿಸಲಾಗಿದೆ. ಮೇ.29 ರಂದು ಬೆಳಗಿನ ಜಾವ 2.15ರ ಸುಮಾರಿಗೆ ನಗರದ ಬಿಕರ್ನಕಟ್ಟೆಯ ಜಂಕ್ಷನ್‌ ಬಳಿಯಿಂದ ಸ್ಕೂಟರ್‌ನಲ್ಲಿ ಧೀರಜ್‌ ಮತ್ತು ಗಣೇಶ್‌ ಅತೀ ವೇಗವಾಗಿ ತೆರಳುತ್ತಿದ್ದಾಗ ರಸ್ತೆ ಬದಿಯ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಓರ್ವ ಡಿವೈಡರ್‌ ಮೇಲೆ ಬಿದ್ದಿದ್ದು, ಮತ್ತೋರ್ವ ರಸ್ತೆಯಲ್ಲಿ ಬಿದ್ದಿದ್ದಾರೆ. ಅಪಘಾತದ ರಭಸಕ್ಕೆ ಇಬ್ಬರಿಗೂ ಗಂಭೀರ ಗಾಯವಾಗಿದ್ದು, ಇದೇ ವೇಳೆ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಪ್ರವೀಣ್‌ ಕುಮಾರ್‌ ಎಂಬುವವರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ವೀಡಿಯೋ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply