LATEST NEWS
ಬೈಕ್ ಗೆ ಡಿಕ್ಕಿ ಹೊಡೆದ ಟೆಂಪೋ – ಯುವತಿ ಸಾವು….!!
ಉಡುಪಿ ನವೆಂಬರ್ 16: ಟೆಂಪೋ ಒಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಯುವತಿ ಸಾವನಪ್ಪಿರುವ ಘಟನೆ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ರಿಕ್ಷಾ ನಿಲ್ದಾಣ ಬಳಿ ನಡೆದಿದೆ. ಬೈಕ್ ನಲ್ಲಿದ್ದ ಯುವಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.
ಮೃತ ಯುವತಿಯನ್ನು ಪಡುಬಿದ್ರಿ ಕಂಚುನಡ್ಕದ ನಿವಾಸಿ ನಿಹಾಲ ಎಂದು ಗುರುತಿಸಲಾಗಿದೆ. ಮತ್ತು ಯುವಕನನ್ನು ಬೆಳಪುವಿನ ಷರೀಫ್ ಎಂದು ಗುರುತಿಸಲಾಗಿದೆ. ಅವರಿಗೆ ಮದುವೆ ನಿಶ್ಚಯವಾಗಿದ್ದು, ಉಡುಪಿ ಕಡೆಯಿಂದ ಪಲ್ಸರ್ ಬೈಕನ್ನಲ್ಲಿ ಬರುತ್ತಿದ್ದ ಸಂದರ್ಭ ಹಿಂಬದಿಯಿಂದ ಬಂದ ಟಿಪ್ಪರ್ ನೇರವಾಗಿ ಡಿಕ್ಕಿ ಹೊಡೆದಿದೆ. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
You must be logged in to post a comment Login