FILM
ನಾನು ಬದುಕಲ್ಲ ಸಾಯಲು ಬಿಡಿ ಎಂದ ಬಿಗ್ ಬಾಸ್ ನಟಿ..!!
ಬೆಂಗಳೂರು ಜುಲೈ 22: ಈಗಾಗಲೇ ಡಿಪ್ರೆಶನ್ ಗೆ ಒಳಗಾಗಿ ಸೆಲೆಬ್ರೆಟಿಗಳು ಆತ್ಮಹತ್ಯೆಗೆ ಯತ್ನಿಸುತ್ತಿದ್ದು, ಬಾಲಿವುಡ್ನ ಎಂಎಸ್ ಧೋನಿ ಖ್ಯಾತಿಯ ಸುಶಾಂತ್ ಸಿಂಗ್ ಡಿಪ್ರೆಶನ್ನಿಂದಲೇ ಸಾವನ್ನಪ್ಪಿದ ಬೆನ್ನಲ್ಲೆ, ದೇಶದ ಹಲವು ಚಿತ್ರರಂಗದಲ್ಲೂ ಈಗಾಗಲೇ ಹಲವು ಡಿಪ್ರೆಶನ್ ಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದೀಗ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 3 ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಇದೀಗ ಡಿಪ್ರೆಶನ್ಗೆ ಒಳಗಾಗಿ ಫೇಸ್ ಬುಕ್ನಲ್ಲಿ ಐ ಕ್ವಿಟ್ ದಿಸ್ ವರ್ಲ್ಡ್ ಎಂದು ಫೋಸ್ಟ್ ಮಾಡಿ ಸೂಸೈಡ್ ಮಾಡಿಕೊಳ್ಳಲು ಯತ್ನಿಸಿದ್ದಾರೆ.
ಜಯಶ್ರೀ ತಮ್ಮ ಫೇಸ್ ಬುಕ್ನಲ್ಲಿ ಐ ಕ್ವಿಟ್ ದಿಸ್ ವರ್ಲ್ಡ್ ( ನನಗೆ ಈ ಜಗತ್ತೂ ಬೇಡ..ಡಿಪ್ರೆಷನ್ ಬೇಡಾ ) ಎಂದು ಪೋಸ್ಟ್ ಮಾಡಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಜಯಶ್ರೀ ಫೇಸ್ ಬುಕ್ನಲ್ಲಿ ಮಾಡಿರುವ ಪೋಸ್ಟ್ಗೆ ಆಕೆಯ ಅನೇಕ ಸ್ನೇಹಿತರು ಆಕೆಯ ಸರಣಿ ಪೋಸ್ಟ್ಗಳನ್ನು ಮಾಡುತ್ತಿದ್ದಾರೆ.
ಮಾನಸಿಕ ಖಿನ್ನತೆಗೆ ಒಳಗಾಗಿ ಜಯಶ್ರೀ ವಿಷಾ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ನನ್ನನ್ನು ಸಾಯಲು ಬಿಡಿ ನನಗೆ ಬದುಕಲು ಇಷ್ಟವಿಲ್ಲ ಎಂದು ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದಾರೆ. ಇದೀಗ ಸ್ನೇಹಿತರು ಹಾಗು ಕುಟುಂಬದವರು ಮನವೊಲಿಸಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು ಟ್ರೀಟ್ಮೆಂಟ್ ಪಡೆಯುತ್ತಿದ್ದಾರೆ.ಸದ್ಯ ಅಪಾಯದಿಂದ ಹೊರ ಬಂದಿದ್ದು, ನಾನು ಚೆನ್ನಾಗಿ ಇದ್ದೇನೆ ಎಂದು ಫೆಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Facebook Comments
You may like
-
ಕನ್ನಡಿಗ ಗೋಪಿನಾಥ್ ರ ಜೀವನ ಕಥೆ-ಆಸ್ಕರ್ ರೇಸ್ನಲ್ಲಿ ಸೂರರೈ ಪೊಟ್ರು
-
ಬುರ್ಜ್ ಖಲೀಫ ಮೇಲೆ ವಿಕ್ರಾಂತ್ ರೋಣ..!?
-
ನಟಿ ಶೃತಿ ಹಾಸನ್ ಜೊತೆ ಗಾಯಕ ಸಂಚಿತ್ ಹೆಗ್ಡೆ ಲಿಪ್ ಲಾಕ್….!!
-
ಮಲೆಯಾಳಂನ ರೊಮ್ಯಾಂಟಿಕ್ ತಾತ ಉನ್ನಿಕೃಷ್ಣನ್ ನಂಬೂದಿರಿ ಇನ್ನಿಲ್ಲ
-
ಶಿವಮೊಗ್ಗದಲ್ಲಿ ಬಾಲಿವುಡ್ ಬೆಡಗಿ ಜಾಕಲೀನ್ ಫೆರ್ನಾಂಡಿಸ್
-
ಲಾಕ್ಡೌನ್ ನಂತರ ಮೊದಲ ಬಾರಿಗೆ ‘ಹೌಸ್ಫುಲ್’ ಆದ ಮಂಗಳೂರಿನ ಥಿಯೇಟರ್, ಮಲ್ಟಿಪ್ಲೆಕ್ಸ್ಗಳು
You must be logged in to post a comment Login