ಬೆಂಗಳೂರು ಜನವರಿ 19: ಬಿಗ್ ಬಾಸ್ ಸೀಸನ್ 12 ಮುಗಿದಿದೆ. ಗಿಲ್ಲಿ ನಟ ಬಿಗ್ ಬಾಸ್ ಸೀಸನ್ 12 ರ ಕಪ್ ಎತ್ತಿದ್ದಾರೆ. ಅಲ್ಲದೆ ಕರಾವಳಿಯ ಬೆಡಗಿ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಸೀಸನ್ 12 ರ ರನ್ನರ್ ಅಪ್ ಆಗಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ನನಗೆ ಟ್ರೋಫಿ ಸಿಕ್ಕಿಲ್ಲ ಅಷ್ಟೇ.. ನನಗೆ ಎಲ್ಲವೂ ಸಿಕ್ಕಿದೆ, ನಾನೇ ವಿನ್ನರ್ ಎಂದು ಖುಷಿಪಟ್ಟಿದ್ದಾರೆ.

ನಾನಂತೂ ಏನೂ ಅನ್ಕೊಂಡಿರಲಿಲ್ಲ. ತುಂಬಾ ಖುಷಿಯಾಗಿದೆ. ಯಾವ ಸ್ಥಾನ ಅನ್ನೋದು ಮ್ಯಾಟರ್ ಆಗಲ್ಲ, ನಾನು ಇಲ್ಲಿವರೆಗೂ ಬಂದಿದೀನಿ, ಟ್ರೋಫಿ ಒಂದು ಸಿಕ್ಕಿಲ್ಲ ಅಷ್ಟೇ, ಜನರು ನನ್ನನ್ನು ಇಲ್ಲಿವರೆಗೂ ಕರೆದುಕೊಂಡು ಬಂದಿದ್ದಾರೆ. ನಾನೇ ವಿನ್ನರ್ ಅಲ್ವಾ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಕೆಲವು ಭಾವನೆಗಳನ್ನು ತೋರ್ಪಡಿಸೋಕೆ ಆಗಲ್ಲ ಹಾಗೂ ಪದಗಳಿಂದ ವರ್ಣಿಸೋಕೆ ಆಗಲ್ಲ. ಗಿಲ್ಲಿ ಗೆದ್ದಿದ್ದು, ತುಂಬಾ ಖುಷಿಯಿದೆ. ಆಲ್ ದಿ ಬೆಸ್ಟ್, ಖುಷಿಯಾಗಿರಿ. ನನಗೆ ಕೆಲ ದಿನಗಳ ಹಿಂದೆಯಷ್ಟೇ ಕನಸು ಬಿದ್ದಿತ್ತು. ಒಂದು ಕಡೆ ನಾನು ಹಾಗೂ ಇನ್ನೊಂದು ಕಡೆ ಗಿಲ್ಲಿ ಅವರಿದ್ದರು. ನಾನಾ? ಅವರಾ? ಎಂಬ ಪ್ರಶ್ನೆಯಿತ್ತು. ಅದರಂತೆಯೇ ಆಗಿದೆ ಎಂದು ಹೇಳಿದ್ದಾರೆ.
ಬರೀ ಕರಾವಳಿ ಜನ ಅಷ್ಟೇ ಅಲ್ಲ.. ಇಡೀ ಕರ್ನಾಟಕ ಜನ ವೋಟ್ ಮಾಡಿದ್ದಾರೆ. ಅವರ ಪ್ರೀತಿಯಿಂದಲೇ ನಾನು ಇಲ್ಲಿವರೆಗೂ ಬಂದಿದ್ದೀನಿ. ನಾನು ವ್ಲಾಗಿಂಗ್ ಮಾಡಿಕೊಂಡು ಮುಂದುವರೀತಿನಿ. ಇನ್ನೂ ಸಿನಿಮಾ ಮಾಡಲ್ಲ. ನನಗೆ ಆಕ್ಟಿಂಗ್ ಮಾಡಲ್ಲ. ಮುಂದಿನದ್ದು ಏನೋ ಯೋಚಿಸಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ರಕ್ಷಿತಾ ರನ್ನರ್ ಅಪ್ ಆಗಿದ್ದಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.