ಮೈಸೂರು, ಫೆಬ್ರವರಿ 05: ಸದಾ ಒಂದಿಲ್ಲೊಂದು ವಿವಾದಗಳ ಮೂಲಕವೇ ಸದ್ದು ಮಾಡುತ್ತಿರುವ ಬಿಗ್ ಬಾಸ್ ಖ್ಯಾತಿಯ ರಜತ್ ಯಾನೆ ಬುಜ್ಜಿ ಈ ಬಾರಿ ಮತ್ತೊಂದು ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಹೌದು ಅಂದು ಮತ್ತು ಮುಚ್ಚು ಹಿಡಿದು ಪೋಸ್ ಕೊಟ್ಟು ಬಳಿಕ ಜೈಲಿಗೂ ಹೋಗಿ ಬಂದಿದ್ದ ರಜತ್ ಅವರು ಈ ಬಾರಿ ಮೈಸೂರಿನ ಪಾರಂಪರಿಕ ಹಳೆ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಅನುಮತಿ ಇಲ್ಲದೆ ಸಿಗರೇಟ್ ಸೇದುವ ರೀಲ್ಸ್ ಮಾಡಿದ್ದಾರೆ ಅನ್ನುವ ಆರೋಪವೊಂದು ಕೇಳಿಬಂದಿದೆ.
ಸದ್ಯ ಈ ಹೊಸ ರೀಲ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.