ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್ ಚಾಲ್ತಿಯಲ್ಲಿದೆ. ಸ್ಪರ್ಧಿಗಳ ಕುಟುಂಬಸ್ಥರು ‘ಬಿಗ್ ಬಾಸ್’ ಮನೆಗೆ ಭೇಟಿ ನೀಡುತ್ತಿದ್ದಾರೆ. ಈಗಾಗಲೇ ರಾಶಿಕಾ, ಸೂರಜ್, ಧನುಷ್, ರಕ್ಷಿತಾ ಕುಟುಂಬಸ್ಥರು ‘ಬಿಗ್ ಬಾಸ್’ ಮನೆಗೆ ಬಂದು ಹೋಗಿದ್ದಾರೆ. ಇದೀಗ ಗಿಲ್ಲಿ ನಟ ಅವರ ತಂದೆ ತಾಯಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಗಿಲ್ಲಿ ತಂದೆ ಬರುತ್ತಿದ್ದಂತೆ ಗಿಲ್ಲಿಗೆ ಕೋಲಿನಲ್ಲಿ ಬಾರಿಸಿದ್ದಾರೆ.

ಅಂತೂ ಗಿಲ್ಲಿಗೆ ಬುದ್ಧಿ ಹೇಳಿ ಹೊಡೆಯುವರು ಬಂದಿದ್ದಾರೆ ಅಂತಾ ಈ ದೃಶ್ಯ ಕಂಡು ಮನೆ ಮಂದಿ ಎಲ್ಲಾ ಖುಷಿಯಾಗಿದ್ದಾರೆ..ಇನ್ನು., ಗಿಲ್ಲಿ ಅಮ್ಮ ನೀನು ಯಾಕೇ ಹಾಗೆ ಬಂದೆ ಕೂದಲಿಗೆ ಬಣ್ಣ ಹಾಕಿಸಿಕೊಂಡು ಬರಬಹುದಾಗಿತ್ತು ಎಂದಿದ್ದಾರೆ.

ಆದಕ್ಕೆ ಪ್ರತಿಯಾಗಿ “ನಿನ್ಯಾಕೆ ಕೂದಲನ್ನು ಬಾಚಿಕೊಳ್ಳದೆ ಹಾಗೇ ಇಟ್ಟುಕೊಂಡಿದೀಯಾ’ ಎಂದು ಪ್ರಶ್ನೆ ಮಾಡಿದರು. ಆ ಬಳಿಕ ಹಾಗೇ ಸುಮ್ಮನಾಗದೇ ಗಿಲ್ಲಿ ತಲೆಗೆ ಎಣ್ಣೆ ಹಾಕಿ ಸ್ನಾನ ಕೂಡ ಮಾಡಿಸಿ ರಾಜಕುಮಾರನಂತೆ ರೆಡಿ ಮಾಡಿದ್ದಾರೆ.



