Connect with us

    LATEST NEWS

    10 ಪೊಲೀಸ್ ವಾಹನ ಒಂದು ದೊಡ್ಡ ಕಂಟೈನರ್ ಲಾರಿ ಮಂಗಳೂರಿನಲ್ಲಿ ನಿನ್ನೆ ರಾತ್ರಿ ಫಾಸ್ಟ್ ಅಂಡ್ ಫ್ಯೂರಿಯಸ್

    10 ಪೊಲೀಸ್ ವಾಹನ ಒಂದು ದೊಡ್ಡ ಕಂಟೈನರ್ ಲಾರಿ ಮಂಗಳೂರಿನಲ್ಲಿ ನಿನ್ನೆ ರಾತ್ರಿ ಫಾಸ್ಟ್ ಅಂಡ್ ಫ್ಯೂರಿಯಸ್

    ಮಂಗಳೂರು ನವೆಂಬರ್ 21: ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ಕಂಟೈನರ್ ಲಾರಿ ಡ್ರೈವರ್ ನ ಫಾಸ್ಟ್ ಆಂಡ್ ಫ್ಯೂರಿಯಸ್ ಚೇಸ್ ಗೆ ಮಂಗಳೂರು ಪೊಲೀಸರು ಸುಸ್ತಾಗಿದಲ್ಲದೇ, ಹತ್ತು ಜೀಪ್ ಗಳಲ್ಲಿ ಚೇಸ್ ಮಾಡಿ ಕೊನೆಗೂ ಹಿಡಿಯಲು ಯಶಸ್ವಿಯಾಗಿದ್ದಾರೆ.

    ಈ ಘಟನೆ ನಿನ್ನೆ ರಾತ್ರಿ ಸುಮಾರು 1.30 ಗಂಟೆಯ ಹೊತ್ತಿಗೆ ನಡೆದಿದ್ದು,ನಾಗಾಲ್ಯಾಂಡ್ ನೊಂದಣಿಯ ಕಂಟೈನರ್ ಲಾರಿಯನ್ನು ಚಾಲಕ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆಗೆ ಅಡ್ಡಿಯೊಡ್ಡಿ ಅಲ್ಲಿಂದ ಪರಾರಿಯಾಗಿದ್ದಾನೆ.

    ನಂತರ ನಡೆದದ್ದು ಸಿನೆಮಾ ಸ್ಟೈಲ್ ನ ಚೇಸಿಂಗ್ ತಲಪಾಡಿಯಿಂದ ತಪ್ಪಿಸಿಕೊಂಡು ಅಲ್ಲಿಂದ ನೇರವಾಗಿ ಮಂಗಳೂರಿಗೆ ರಭಸವಾಗಿ ಕಂಟೈನರ್ ವಾಹನ ಚಲಾಯಿಸಿದ್ದಾನೆ. ಇದರ ಪರಿಣಾಮವಾಗಿ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದು ಹಾನಿಗೊಳಿಸಿದ್ದಾನೆ.
    ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಂಟೈನರ್ ಲಾರಿಯನ್ನು ಸುಮಾರು ಹತ್ತು ಜೀಪ್ ಗಳಲ್ಲಿ ಪೊಲೀಸರು ಹಿಂಬಾಲಿಸಿದ್ದಾರೆ. ಅಷ್ಟು ದೊಡ್ಡ ಕಂಟೈನರ್ ನಲ್ಲಿ ಪೊಲೀಸರಿಗೆ ಚೇಸಿಂಗ್ ನ ಪಾಠ ಹೇಳಿಕೊಟ್ಟ ಡ್ರೈವರ್ ಕೊನೆಗೆ ಮಂಗಳೂರು ಬೈಕಂಪಾಡಿ ತಲುಪಿದ್ದಾನೆ.
    ಅಲ್ಲಿಂದ ಮೀನಕಳಿಯ ರಸ್ತೆ ಮುಖಾಂತರ ತಪ್ಪಿಸಲು ಪ್ರಯತ್ನಿಸಿದ್ದಾನೆ. ಆದ್ರೆ ಅಲ್ಲಿ ಕಿರುಸೇತುವೆಯೊಂದು ಇದ್ದ ಕಾರಣ ಅಲ್ಲಿಂದ ವಾಹನ ಮೂಲಕ ತಪ್ಪಿಸಿಕೊಳ್ಳಲು ಆತನಿಗೆ ತೊಂದರೆಯಾಗಿದೆ.

    ಆದರೆ ಹೇಗಾದ್ರೂ ಪೊಲೀಸರಿಂದ ತಪ್ಪಿಸಿಕೊಳ್ಳಬೇಕೆನ್ನುವ ಉದ್ದೇಶದಿಂದ ಅಲ್ಲಿಯೇ ಸೇತುವೆಗೆ ಹಾರಿದ್ದಾನೆ. ನೀರಿನಿಂದ ಮೇಲೆ ಬರುವಂತೆ ಪೊಲೀಸರು ಎಷ್ಟು ಮನವಿ ಮಾಡಿಕೊಂಡರು ಆತ ಮೇಲೆ ಬರಲಿಕ್ಕೆ ಒಪ್ಪಲೇ ಇಲ್ಲ. ಕೊನೆಗೂ ಸುಮಾರು 2.30 ಗಂಟೆ ಹೊತ್ತಿಗೆ ಪೊಲೀಸರೇ ನೀರಿಗಿಳಿದು ಹಗ್ಗ ಕಟ್ಟಿ ಮೇಲೆಕ್ಕೆತ್ತಿದ್ದಾರೆ. ಕೊನೆಗೆ ಕಂಟೈನರ್ ಪರೀಕ್ಷಿಸಿದಾಗ ಅದರಲ್ಲಿ ಯಾವ ವಸ್ತುಗಳು ಪೊಲೀಸರಿಗೆ ದೊರಕಲಿಲ್ಲ ಅಂತ ಹೇಳಲಾಗಿದೆ. ಈ ಸಂಬಂಧ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply