LATEST NEWS
ಮೋದಿ ಜನ್ಮದಿನಾಚರಣೆ ಪ್ರಯುಕ್ತ ಮಂಗಳೂರಿನಲ್ಲಿ ಬೃಹತ್ ರಕ್ತದಾನ ಶಿಬಿರ
ಮಂಗಳೂರು ಸೆಪ್ಟೆಂಬರ್ 7: ಪ್ರಧಾನಿ ನರೇಂದ್ರ ಮೋದಿಯವರ 70ನೇ ಜನ್ಮದಿನಾಚರಣೆ ಹಿನ್ನಲೆ ಸೆಪ್ಟೆಂಬರ್ 17 ರಂದು ಮಂಗಳೂರಿನಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಮಂಗಳೂರಿನ ಸಮಾಜಮುಖಿ ಸೇವಾಸಂಸ್ಥೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಮಂಗಳೂರು ಕೊಡಿಯಾಲ್ ಬೈಲ್ ನಲ್ಲಿರುವ ಟಿ.ವಿ.ರಮಣ್ ಪೈ ಸಭಾಂಗಣದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಈ ಶಿಬಿರ ಪ್ರಾರಂಭವಾಗಲಿದೆ.
ಮೋದಿಜಿಯವರ ಜನ್ಮದಿನದಂದೇ ಈ ಶಿಬಿರ ನಡೆಯಲಿದ್ದು ಬೆಳಿಗ್ಗೆ 10 ಗಂಟೆಗೆ ಗಣ್ಯರು ಉದ್ಘಾಟಿಸಲಿದ್ದಾರೆ. ಮೋದಿಜಿಯವರ 70 ನೇ ಜನ್ಮದಿನವಾಗಿರುವುದರಿಂದ ಆಂದು ರಕ್ತದಾನ ಮಾಡಲು ಬರುವ ಮೊದಲ 70 ರಕ್ತದಾನಿಗಳಿಗೆ ಮೋದಿಜಿಯವರ ಆಕರ್ಷಕ ಚಿತ್ರವಿರುವ ಉತ್ತಮ ಗುಣಮಟ್ಟದ ಟೀ ಶರ್ಟ್, ಮಾಸ್ಕ್, ರಿಸ್ಟ್ ಬ್ಯಾಂಡ್, ಮಗ್ಗ್ ಮತ್ತು ಕೇಂದ್ರ ಸರಕಾರದ ಆಯುಷ್ ಇಲಾಖೆಯಿಂದ ಪ್ರಮಾಣೀಕೃತ ಒಂದು ತಿಂಗಳಿಗಾಗುವಷ್ಟು ಆಯುಷ್ ಕ್ವಾಥ್ ಚೂರ್ಣವನ್ನು ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಈ ರಕ್ತದಾನ ಶಿಬಿರದಲ್ಲಿ ಸಹೃದಯಿಗಳು ಭಾಗವಹಿಸಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಉತ್ತಮ ಕಾರ್ಯದೊಂದಿಗೆ ಕೈ ಜೋಡಿಸಬೇಕಾಗಿ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.
Facebook Comments
You may like
-
ರಾಜಕಾರಣಿಗಳು ಕೊರೊನಾ ವಾರಿಯರ್ಸ್ ಅಲ್ಲ..ಅವರಿಗೆ ಮೂರನೇ ಹಂತದಲ್ಲಿ ಲಸಿಕೆ – ಮೋದಿ
-
ದೀಪಕ್ ರಾವ್ ಸ್ಮರಣಾರ್ಥ ಅಶಕ್ತರಿಗೆ ಗಾಲಿ ಕುರ್ಚಿ ವಿತರಣೆ
-
ಮನ್ ಕೀ ಬಾತ್ ನಲ್ಲಿ ಉಡುಪಿಯ ನವದಂಪತಿ ಹೆಸರು ಉಲ್ಲೇಖಿಸಿದ ಮೋದಿ..
-
ಪ್ರಧಾನಿ ನರೇಂದ್ರ ಮೋದಿಯವರ ಕೇಶರಾಶಿಯ ರಹಸ್ಯ ಬಯಲು ಮಾಡಿದ ಪೇಜಾವರ ಶ್ರೀ…!
-
ನಮ್ಮ ರೈತರು ಭಾರತದ ಆಹಾರ ಸೈನಿಕರು – ಅನ್ನದಾತನ ಬೆಂಬಲಕ್ಕೆ ನಿಂತ ಪ್ರಿಯಾಂಕ ಚೋಪ್ರಾ
-
ದೀಪಗಳನ್ನು ಬೆಳಗಿಸಿ ಯೋಧರಿಗೆ ಕೃತಜ್ಞತೆ ಸಲ್ಲಿಸೋಣ: ಮೋದಿ
You must be logged in to post a comment Login