ಬಿಎಚ್‍ಇಎಲ್ ನಿಂದ ಮಿಯಾರ್ ಕಂಬಳ ಕ್ರೀಡಾಂಗಣಕ್ಕೆ ಛಾವಣಿಯುಕ್ತ ಗ್ಯಾಲರಿ

ಉಡುಪಿ, ಜನವರಿ 30 : ಬಿಎಚ್‍ಇಎಲ್ ತನ್ನ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ, ಕಂಬಳ ಕ್ರೀಡಾಂಗಣ ಮಿಯಾರ್, ಕಾರ್ಕಳ, ಉಡುಪಿ ಜಿಲ್ಲೆ, ಇದಕ್ಕೆ ರೂಪಾಯಿ 25 ಲಕ್ಷ ವೆಚ್ಚದಲ್ಲಿ ಛಾವಣಿಯುಕ್ತ ಗ್ಯಾಲರಿಯನ್ನು ನಿರ್ಮಿಸಿದ್ದು, ಗ್ಯಾಲರಿ ಫಲಕವನ್ನು , ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಅವರಿಗೆ ಹಸ್ತಾಂತರಿಸಲಾಯಿತು.

ಬಿಎಚ್‍ಇಎಲ್-ಐಎಸ್‍ಜಿ ಬೆಂಗಳೂರು ಇದರ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಬಿ.ಕೆ.ಆರ್. ಪಟ್ನಾಯಕ್ ಬಿಎಚ್‍ಇಎಲ್ ತನ್ನ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಕೈಗೊಂಡಿರುವ ಅನೇಕ ಯೋಜನೆಗಳ ಬಗ್ಗೆ ಉಲ್ಲೇಖಿಸಿದರು.

ಬಿಎಚ್‍ಇಎಲ್‍ನ ಡಿಜಿಎಂ & ಸಿಎಸ್‍ಆರ್ ಸಂಯೋಜಕ ಜೆ.ಜಾನ್ ಅಂಬ್ರೋಸ್ ಮಾತನಾಡಿ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅನುಷ್ಠಾನಕ್ಕಾಗಿ ಬಿಎಚ್‍ಇಎಲ್ ಮತ್ತು ಉಪ-ಆಯುಕ್ತ ಮತ್ತು ಉಡುಪಿ ಜಿಲ್ಲಾ ಮ್ಯಾಜಿಸ್ಟ್ರೇಟ್, ಇವರ ನಡುವೆ ಒಂದು ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿತ್ತು ಇದರ ಪ್ರಕಾರವಾಗಿ ಗ್ಯಾಲರಿಯ ನಿರ್ಮಾಣಕ್ಕಾಗಿ ಬಿಎಚ್‍ಇಎಲ್ 25 ಲಕ್ಷ ರೂ ಆರ್ಥಿಕ ಬೆಂಬಲ ಒದಗಿಸಿದೆ. ಉಡುಪಿ ನಿರ್ಮಿತಿ ಕೇಂದ್ರ ನಿರ್ಮಾಣದ ಕೆಲಸವನ್ನು ಕಾರ್ಯಗತಗೊಳಿಸಿದೆ ಎಂದು ಹೇಳಿದರು.

Facebook Comments

comments