LATEST NEWS
ನಾಳೆ ನಮ್ಮ ಸರಕಾರ ಬಂದಾಗ ನಿಮಗೆ ಏನು ಮಾಡಬೇಕು ಎಂದು ಗೊತ್ತಿದೆ ಪೊಲೀಸರಿಗೆ ಶಾಸಕ ಭರತ್ ಶೆಟ್ಟಿ ವಾರ್ನಿಂಗ್
ಮಂಗಳೂರು ಅಗಸ್ಟ್ 22: ಐವನ್ ಡಿ ಸೋಜ ಒಬ್ಬ ಮೆಂಟಲ್ ಗಿರಾಕಿ, ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ. ಈ ಐವಾನ್ ಡಿ ಸೋಜ ನನ್ನ ಏನ್ ಮಾಡ್ತಾರೋ ಗೊತ್ತಿಲ್ಲ ಎಂದು ಏಕವಚನದಲ್ಲಿ ಕಾಂಗ್ರೆಸ್ ಎಂ ಎಲ್ ಸಿ ಐವಾನ್ ಡಿ ಸೋಜ ವಿರುದ್ಧ ಶಾಸಕ ಭರತ್ ಶೆಟ್ಟಿ ಕಿಡಿ ಕಾರಿದ್ದಾರೆ.
ರಾಜ್ಯಪಾಲರನ್ನು ಬಾಂಗ್ಲಾದೇಶದ ಪ್ರಧಾನಿ ರೀತಿ ಓಡಿಸಬೇಕಾಗುತ್ತದೆ ಎಂದು ಹೇಳಿಕೆ ನೀಡಿದ್ದ ಎಂಎಲ್ಸಿ ಐವನ್ ಡಿಸೋಜಾ ವಿರುದ್ದ ಮಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಐವಾನ್ ಡಿ ಸೋಜ ಒಬ್ಬ ಮೆಂಟಲ್ ಗಿರಾಕಿ, ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ. ಇವನ ಮನೆಯ ಮೇಲೆ ಕಲ್ಲೂ ತೂರಾಟವನ್ನ ಇವನ ಹುಡುಗರಿಂದಲೇ ಮಾಡಿಸಿರಬಹುದು. ಹೆಲ್ಮೆಟ್ ಹಾಕಿದ ಇಬ್ಬರು ಐವಾನ್ ಡಿ ಸೋಜ ಮನೆ ಮೇಲೆ ಕಲ್ಲೂ ತೂರಾಟ ನಡೆಸಿದ್ದಾರೆ. ಇನ್ನೂ ಹೆಲ್ಮೆಟ್ ಹಾಕಿದ ಇಬ್ಬರು ನಾನು ಹಾಗೂ ವೇದವ್ಯಾಸ್ ಕಾಮತ್ ಎಂದು ಕೇಸ್ ಹಾಕ್ತಾರೋ ಗೊತ್ತಿಲ್ಲ, ಈಗಾಗಲೇ ಸಾಕಷ್ಟು ಕೇಸ್ ಹಾಕಿದ್ದಾರೆ ಇನ್ನೂ ರೌಡಿ ಶೀಟರ್ ಆಗಬಹುದೇನೋ ಗೊತ್ತಿಲ್ಲ ಎಂದರು.
ಐವನ್ ರಾಜ್ಯಪಾಲರ ಮನೆಗೆ ನುಗ್ಗಿ ಹೊಡಿಯುತ್ತೇವೆ,ಓಡಿಸುತ್ತೇವೆ ಎಂದು ಹೇಳಿದ್ರು, ಅವರ ಮೇಲೆ ಕೇಸ್ ಹಾಕಲು ಪೊಲೀಸರು ಹಿಂದೆ ಮುಂದೆ ನೋಡುತ್ತಾರೆ . ಸರಕಾರ ಇದೆ ಎಂಬ ಕಾರಣಕ್ಕೆ ಪೋಲೀಸರು ನಿಮ್ಮ ಆತ್ಮ ಸಾಕ್ಷಿಯಾಗಿ ಸರಿಯಾಗಿ ಕೆಲಸ ಮಾಡಿ. ನಮಗೂ ಕಲ್ಲು ಹೊಡೆಯೋದಕ್ಕೆ 5 ನಿಮಿಷ ಸಾಕು, ಟಯರ್ ಹಚ್ಹೋದಕ್ಕೆ 5 ನಿಮಿಷ ಸಾಕು , ನಮ್ಮ ಯುವ ಮೋರ್ಚಾ ಕಾರ್ಯಕರ್ತರು ರೆಡಿ ಇದ್ದಾರೆ, ನಮಗೂ 10 ಟಯರ್ ಇಲ್ಲಿ ಸುಡಲು ಬರುತ್ತೆ . ಆ ರೀತಿಯ ಆರಾಜಾಕತೆಯ ಪರಿಸ್ಥಿತಿ ತರುವ ಅವಶ್ಯಕತೆ ನಮಗಿಲ್ಲ ಎಂದರು.
ಪ್ರತಿಭಟನಾ ಸಭೆಯಲ್ಲಿ ಪೊಲೀಸರಿಗೆ ವಾರ್ನಿಂಗ್ ಕೊಟ್ಟ ಶಾಸಕ ಭರತ್ ಶೆಟ್ಟಿ ಈವಾಗ ಕಾಂಗ್ರೆಸ್ ಸರಕಾರವಿದೆ ಎಂಬ ಕಾರಣಕ್ಕೆ ಕೇಸ್ ಹಾಕುತ್ತಿದ್ದೀರ, ನಾಳೆ ನಮ್ಮ ಸರಕಾರ ಬಂದಾಗ ನಿಮಗೆ ಏನು ಮಾಡಬೇಕು ಎಂದು ಗೊತ್ತಿದೆ. ನೆನಪಿರಲಿ ಸರಕಾರ ಬದಲಾಗುತ್ತೆ, ಅಧಿಕಾರಿಗಳು ನೀವೇ ಇರುತ್ತಿರಿ , ನೀವು ಯಾರು ಅನ್ಯಾಯ ಮಾಡಬೇಡಿ, ಸಿ ಎ ಎ ಗಲಾಟೆಯಾದಾಗ ನಿಮ್ಮ ಪರ ನಿಂತಿದ್ದು ಬಿಜೆಪಿ ಹಾಗೂ ಸಂಘಟನೆಯ ಕಾರ್ಯಕರ್ತ ಎಂದರು.
You must be logged in to post a comment Login