Connect with us

    DAKSHINA KANNADA

    ಬೆಂಗಳೂರಿನಲ್ಲಿ ಕೊರೊನಾ ನಾಗಲೋಟ: ಒಂದೇ ದಿನ 6 ಸಾವಿರ ಹೊಸ ಪ್ರಕರಣ..!

    ಬೆಂಗಳೂರು:  ಸಿಲಿಕಾನ್ ಸಿಟಿ ಬೆಂಗಳೂರು ಮಹಾಮಾರಿ ಕೊರೊನಾದಿಂದ ತತ್ತರಿಸಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರು ನಗರದಲ್ಲಿ ಕೊರೊನಾ ಪ್ರಕರಣಗಳು ನಾಗಲೋಟದಿಂದ ಹೆಚ್ಚಾಗುತ್ತಿದ್ದು ಜನತೆ ಮತ್ತು ಸರ್ಕಾರವನ್ನು ಆತಂಕಕೀಡುಮಾಡಿದೆ.

    ನಗರದಲ್ಲಿ ನಿನ್ನೆ  ಕೋವಿಡ್ ಪಾಸಿಟಿವ್ ಪ್ರಕರಣ ಇದೇ ಮೊದಲು ಆರು ಸಾವಿರದ ಗಡಿ ಮೀರಿದೆ.

    ಕಳೆದ 24 ಗಂಟೆಗಳ ಅವಧಿಯಲ್ಲಿ ನಗರದಲ್ಲಿ 6,034 ಪ್ರಕರಣಗಳು ದೃಢಪಟ್ಟಿದ್ದು ಈಗಾಗಲೇ ಪೊಲೀಸ್ ಇಲಾಖೆ  ಜಾರಿಗೊಳಿಸಿದ ಖಡ್ಡಾಯ ಮಾಸ್ಕ್, ಸೆಕ್ಷನ್ 144 ಗಳು ಲೆಕ್ಕಕ್ಕಿಲ್ಲದಂತೆ ಮಾಡಿದೆ.

    ರಾಜ್ಯದಲ್ಲಿ ಬರೋಬ್ಬರಿ 6,976 ಹೊಸ ಪ್ರಕರಣಗಳು ದೃಢಪಟ್ಟಿವೆ.

    ಇದೇ ಅವಧಿಯಲ್ಲಿ ಸೋಂಕಿನಿಂದ 35 ರೋಗಿಗಳು ರಾಜ್ಯದಲ್ಲಿ ಸಾವಿಗೀಡಾಗಿದ್ದಾರೆ. ಹೊಸ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವುದರಿಂದ ಸಕ್ರಿಯ ಪ್ರಕಣಗಳ ಸಂಖ್ಯೆ 49,254ಕ್ಕೆ ಏರಿಕೆಯಾಗಿದೆ.

     ಇನ್ನು  ರಾಜ್ಯದಲ್ಲಿ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗುತ್ತಿರುವ ಜಿಲ್ಲೆಗಳಲ್ಲಿ ರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆದೇಶ ನೀಡಿದ್ದಾರೆ.

    ಪ್ರಧಾನಿ ಸಲಹೆ ಮೇರೆಗೆ ರಾಜ್ಯದ 7 ಜಿಲ್ಲೆಗಳ 8 ನಗರಗಳಲ್ಲಿ ನೈಟ್ ಕರ್ಫ್ಯೂ  ಜಾರಿಗೊಳಿಸಲಾಗುತ್ತದೆ. ರಾಜ್ಯದ 9 ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಕೊರೊನಾ ಕರ್ಫ್ಯೂ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರು ನಗರ, ಮೈಸೂರು, ಕಲಬುರ್ಗಿ, ತುಮಕೂರು, ಬೀದರ್, ಮಂಗಳೂರು, ಉಡುಪಿ ಮತ್ತು ಮಣಿಪಾಲ್ ನಗರಗಳಲ್ಲಿ ಕರ್ಫ್ಯೂ ಜಾರಿಗೆ ಬರಲಿದೆ. ರಾಜ್ಯದಲ್ಲಿ ಲಾಕ್‌ಡೌನ್ ಜಾರಿಗೊಳಿಸದಿರಲು ಮುನ್ನೆಚ್ಚರಿಕೆ ವಹಿಸಿ ಎಂದು ಸೂಚನೆ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply