ಬೆಂಗಳೂರು, ಫೆಬ್ರವರಿ 27: ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಪತ್ತೆಗೆ ಮುಂದಾಗುವ ಮೂಲಕ ಅಪರಾಧ ಕೃತ್ಯಗಳನ್ನು ತಡೆಯುವುದಕ್ಕೆ ಪೊಲೀಸ್ ಇಲಾಖೆ ಹೊಸ ಹೆಜ್ಜೆಯನ್ನು ಇಟ್ಟಿದೆ.

ವಿದೇಶಿಗರಿಂದಲೇ ನಗರದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿದ್ದು ಇದನ್ನು ತಡೆಯಲು ಖಾಕಿ ಪಡೆ ದಿಟ್ಟ ನಿರ್ಧಾರ ಕೈಗೊಂಡಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ  ಈಗಾಗಲೇ ಕಮಿಷನರ್ ಅವರ ಸೂಚನೆಯ ಮೇರೆಗೆ 2,000ಕ್ಕೂ ಹೆಚ್ಚು ವಿದೇಶಿಗರನ್ನು ವಿಚಾರಣೆ ನಡೆಸಲಾಗಿದೆ. ಇವರಲ್ಲಿ ನೈಜೀರಿಯಾ ಮತ್ತು ಬಾಂಗ್ಲಾ ವಲಸಿಗರು ಸೇರಿದಂತೆ ಹಲವರು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವುದು ಕಂಡುಬಂದಿದೆ. ಒಂದು ವೇಳೆ ಮನೆಯ ಮಾಲೀಕರು ಸರಿಯಾಗಿ ವಿಚಾರಿಸದೆ ವಾಸಕ್ಕೆ ಜಾಗವನ್ನು ಮನೆಯ ಮಾಲೀಕರು ಕೊಟ್ರೆ, ಸೂಕ್ತ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಲಿದ್ದಾರೆ.

ಇನ್ನು ಇತ್ತ ಯಾರಿಗಾದರೂ ವಿದೇಶಿಗರಿಗೆ ಮನೆಯನ್ನು ನೀಡುವ ಮಾಲೀಕರು ಮೊದಲು ಫಾರ್ಮ್ ಸಿ ಮಾಹಿತಿಯನ್ನು ಸ್ಥಳೀಯ ಠಾಣೆಗೆ ನೀಡಬೇಕು. ಇಲ್ಲದೆ ಹೋದರೆ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಡಿಪೋಟೇಷನ್ ಮಾಡುವ ಕೆಲಸವನ್ನು ಪೊಲೀಸರು ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

Share Information