ಬೆಂಗಳೂರು ಸೆಪ್ಟೆಂಬರ್ 07: ಕಾರಿನ ಸನ್ ರೂಫ್ ನಿಂದ ಬಾಲಕನೊಬ್ಬ ಹೊರಗೆ ನೋಡುತ್ತಿದ್ದ ವೇಳೆ ಬಾಲಕನಿಗೆ ಓವರ್ ಹೆಡ್ ಬ್ಯಾರಿಕೆಡ್ ಒಂದು ಬಡಿದ ಘಟನೆ ನಡೆದಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸನ್ ರೂಫ್ ಸಹಿತ ಕಾರಿನಲ್ಲಿ ತೆರಳುತ್ತಿದ್ದ ಬಾಲಕನೋರ್ವ ಸನ್ ರೂಫ್ ನಿಂದ ತಲೆ ಹೊರಗೆ ಹಾಕಿದ್ದಾಗ ರಸ್ತೆಯಲ್ಲಿದ್ದ ರೋಡ್ ಓವರ್ ಹೆಡ್ ಬ್ಯಾರಿಕೇಡ್ ಆತನ ತಲೆಗೆ ತಗುಲಿದೆ.
ಈ ವೇಳೆ ಕೂಡಲೇ ಬಾಲಕ ಕಾರಿನೊಳಗೇ ಕುಸಿದಿದ್ದು, ಬಾಲಕ ಕುಸಿಯುತ್ತಿದ್ದಂತೆಯೇ ಕಾರು ನಿಲ್ಲಿಸಿದ ಚಾಲಕ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಈ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.



