Connect with us

    KARNATAKA

    ಮಂಗಳೂರು ಪಣಂಬೂರು ಬೀಚ್‌ನಲ್ಲಿ ಬೆಂಗಳೂರು ಮೂಲದ ಇಬ್ಬರ ಮೃತ್ಯು, ಆತ್ಮಹತ್ಯೆ ಶಂಕೆ..!

    ಮಂಗಳೂರು: ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಬೆಂಗಳೂರಿನ ಜೋಡಿ ಶವ ರೂಪದಲ್ಲಿ ಪತ್ತೆಯಾಗಿದೆ. ಮಧ್ಯ ವಯಸ್ಸಿನ ವ್ಯಕ್ತಿ ಮತ್ತು ಮಹಿಳೆ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ .

    ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ.

    ಮೃತರನ್ನು ಲಕ್ಷ್ಮಿ(40) ಮತ್ತು ಬೋರಲಿಂಗಯ್ಯ (45) ಎಂದು ಗುರುತ್ತಿಸಲಾಗಿದ್ದು, ಬೆಂಗಳೂರು ಮೂಲದವರಾಗಿದ್ದಾರೆ, ನಿನ್ನೆ ಬೆಂಗಳೂರಿನಿಂದ ಆಗಮಿಸಿದದ್ದ ಈ ಜೋಡಿ ಇಂದು ಮುಂಜಾನೆ 5 ಗಂಟೆ ಸುಆರಿಗೆ ಪಣಂಬೂರಿಗೆ ಬಂದು ಸಮುದ್ರಕ್ಕೆ ಧುಮುಕಿದ್ದಾರೆ.

    ಸಮುದ್ರಕ್ಕೆ ಹಾರುವ ಮುಂಚೆ ತಮ್ಮ ಮೋಬೈಲ್ ಮತ್ತಿರ ಸೊತ್ತುಗಳನ್ನು ತೀರದಲ್ಲೇ ಬಿಟ್ಟಿದ್ದರಿಂದ ಪೊಲೀಸರು ಸಂಬಂಧಿಕರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.

    ಇಬ್ಬರ ಶವಗಳನ್ನು ಸ್ಥಳೀಯರ ಸಹಕಾರದಿಂದ ಮೇಲೆತ್ತಿ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. ಪಣಂಬೂರು ಪೊಲೀಸರು ಈ ಬಗ್ಗೆ ತನಿಖೆ ನಡಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply