Connect with us

    LATEST NEWS

    ಹಲಸಿನ ಹಣ್ಣು ತಿಂದ್ರೆ ಏಡ್ಸ್ ಬರಲ್ಲ ಎಂದು ಕೇಳಿದ್ದೇನೆ: ಶಾಸಕ ರಘುಪತಿ ಭಟ್

    ಹಲಸಿನ ಹಣ್ಣು ತಿಂದ್ರೆ ಏಡ್ಸ್ ಬರಲ್ಲ ಎಂದು ಕೇಳಿದ್ದೇನೆ: ಶಾಸಕ ರಘುಪತಿ ಭಟ್

    ಉಡುಪಿ ಜೂನ್ 23: ಹಲಸಿನ ಹಣ್ಣು ತಿಂದ್ರೆ ಏಡ್ಸ್ ಬರಲ್ಲ ಎಂದು ಹಿರಿಯರು, ನಾಟಿ ವೈದ್ಯರು ಹೇಳಿದ್ದನ್ನು ನಾನು ಕೇಳಿದ್ದೇನೆ ಎಂದು ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

    ಉಡುಪಿಯಲ್ಲಿ ಆಯೋಜಿಸಲಾಗಿದ್ದ ಹಲಸು ಮೇಳದಲ್ಲಿ ಮಾತನಾಡಿದ ಅವರು, ಹಲಸಿನ ಹಣ್ಣು ಹೆಚ್ಚೆಚ್ಚು ತಿಂದರೆ ಏಡ್ಸ್ ಬರುವುದಿಲ್ಲ. ಹಲಸಿನ ಕಾಯಿ ತಿಂದರೆ ಏಡ್ಸ್ ಕೂಡಾ ನಿಯಂತ್ರಣವಾಗುತ್ತೆ ಎಂದು ಹಿರಿಯರು ಹೇಳಿರುವುದನ್ನು ಕೇಳಿದ್ದೇನೆ. ನನಗೆ ಈ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಕೆಲವೊಮ್ಮೆ ಇಂತಹಾ ರೂಮರ್ಸ್ ನಿಂದಲೇ ವಿಷಯ ಹೆಚ್ಚು ಪ್ರಚಾರ ಪಡೆಯುತ್ತದೆ. ಹಲಸಿನ ಹಣ್ಣು ಹೆಚ್ಚೆಚ್ಚು ಸೇಲ್ ಆಗುತ್ತದೆ ಎಂದು ಹೇಳಿದರು.

    ಅವರು ಶನಿವಾರ, ದೊಡ್ಡಣಗುಡ್ಡೆಯ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಉಡುಪಿ ಸಹಯೋಗದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಹಲಸು ಮೇಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಹಲಸು ಹೆಚ್ಚಿನ ಪರಿಶ್ರಮವಿಲ್ಲದೇ ಅತ್ಯಂತ ಸುಲಭವಾಗಿ ಬೆಳೆಯಬಹುದಾದ ಬೆಳಯಾಗಿದ್ದು, ಸಮೃದ್ದವಾಗಿ ಬೆಳೆಯುವ ಹಲಸಿನಿಂದ ಹಲವು ಪ್ರಯೋಜನಗಳಿದ್ದು, ನಿರ್ಲಕ್ಷಕ್ಕೆ ಒಳಗಾಗಿದ್ದ ಹಲಸು , ಹಲಸು ಮೇಳಗಳ ಮೂಲಕ ವೈಭವೀಕರಣ ಪಡೆದಿದೆ, ಹಲಸಿನ ಕಾಯಿಯ ಸೇವನೆಯಿಂದ ಮಧುಮೇಹ ನಿಯಂತ್ರಣಕ್ಕೆ ಬರಲಿದ್ದು, ಹಲವು ಔಷಧೀಯ ಗುಣಗಳನ್ನು ಹೊಂದಿದ್ದು, ಹಲಸು ಕೃಷಿಗೆ ಹೆಚ್ಚಿನ ಉತ್ತೇಜನ ದೊರೆಯಬೇಕು ಎಂದು ರಘುಪತಿ ಭಟ್ ಹೇಳಿದರು.

    ದೊಡ್ಡಣಗುಡ್ಡೆಯ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಶನಿವಾರ ನಡೆದ , ಜಿಲ್ಲಾ ಮಟ್ಟದ ಹಲಸು ಮೇಳದಲ್ಲಿ ಎಲ್ಲೆಲ್ಲೂ ಹಲಸಿನ ಪರಿಮಳ ಹರಡಿತ್ತು, ಹಲಸಿನಿಂದ ತಯಾರಿಸಿದ ಹಲಸಿನ ಉತ್ಪನ್ನಗಳ ಮಾರಾಟ, ಪ್ರದರ್ಶನ, ಹಲಸಿನ ಖಾದ್ಯಗಳನ್ನು ಸ್ಥಳದಲ್ಲೇ ತಯಾರಿಸಿ ಮಾರಾಟ ನಡೆಯಿತು, ಹಲಸಿನಿಂದ ತಯಾರಿಸಿದ ಹಲ್ವ, ಚಿಪ್ಸ್, ಹಪ್ಪಳ, ಹಲಸಿನ ಜ್ಯೂಸ್, ಐಸ್ ಕ್ರೀಂ, ಉಪ್ಪಿನ ಕಾಯಿ , ರುದ್ರಾಕ್ಷಿ , ಚಂದ್ರಬಕ್ಕೆ, ಶಿವರಾತ್ರಿ ಹಲಸು, ಅಂಜೂರ ಹಲಸು, ಜೇನು ಬಕ್ಕೆ, ಸಿಂಗಾಪುರ , ಸಮೃದ್ದಿ, ಎ ಟು ಝಡ್ , ಸೂಪರ್ ಅರ್ಲಿ, ಥೈಲ್ಯಾಂಡ್ ಪಿಂಕ್ ಮುಂತಾದ ಹಲವು ತಳಿಯ ಹಲಸು ಗಿಡಗಳ ಮಾರಾಟ ಮತ್ತು ಪ್ರದರ್ಶನ ನಡೆಯಿತು.

    ದೊಡ್ಡಬಳ್ಳಾಪುರ ತಾಲೂಕಿನ ತೂಬುಗೆರೆ ಹಲಸು ಬೆಳಗಾರರ ರೈತ ಸಂಘದ ವತಿಯಿಂದ ಚಂದ್ರ ಬಕ್ಕೆ, ಕೆಂಪು ರುದ್ರಾಕ್ಷಿ, ಹಳದಿ ರುದ್ರಾಕ್ಷಿ ಸೇರಿದಂತೆ ವಿವಿಧ ತಳಿಯ 1.5 ಟನ್ ಹಲಸನ್ನು ಈ ಮೇಳಕ್ಕೆ ತರಲಾಗಿತ್ತು, ಈ ಸಂಘದವತಿಯಿಂದ ಎಲ್ಲಾ ಹಲಸು ಮೇಳಗಳಲ್ಲಿ ಮಾರಾಟ ನಡೆಯುತ್ತಿದ್ದು, 160 ಹಲಸು ಬೆಳೆಯುವ ರೈತ ಸದಸ್ಯರಿಂದ ರಚಿತವಾಗಿರುವ ಈ ಸಂಘದ ವಾರ್ಷಿಕ ವಹಿವಾಟು 28 ಲಕ್ಷ ರೂ ಗಳಾಗಿದ್ದು, ಮಂಗಳೂರಿನಲ್ಲಿ ಐಸ್ ಕ್ರೀಂ ತಯಾರಿಕೆಗೆ ವಾರ್ಷಿಕ 80 ರಿಂದ 100 ಟನ್ ಪೂರೈಕೆ ಮಾಡುತ್ತಿದ್ದು, 12 ರಿಂದ 15 ಲಕ್ಷ ರೂ ಹಲಸು ಮಾರಾಟವಾಗಲಿದೆ, ರಾಜ್ಯ ಮಾತ್ರವಲ್ಲದೇ ಇತರೇ ರಾಜ್ಯಗಳಿಗೆ ಹಲಸಿನ ರಫ್ತು ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ರವಿಕುಮಾರ್ ಮಾಹಿತಿ ನೀಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply