Connect with us

LATEST NEWS

ಬೆಂದೂರ್ ಚರ್ಚ್ ನಲ್ಲಿ ಕಳ್ಳತನ – 4.98 ಲಕ್ಷ ರೂಪಾಯಿ ಕದ್ದು ಪರಾರಿ

ಮಂಗಳೂರು ಎಪ್ರಿಲ್ 6: ಕಳ್ಳನೊಬ್ಬ ಬೆಂದೂರ್ ಚರ್ಚ್ ಆಫೀಸ್ ಗೆ ನುಗ್ಗಿ ಲಕ್ಷಾಂತರ ರೂಪಾಯಿ ಹಣ ಎಗರಿಸಿದ ಘಟನೆ ನಡೆದಿದೆ.


ಎಪ್ರಿಲ್ 5 ರಂದು ಮುಂಜಾನೆ ಸಮಯ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಪೊಲೀಸ್ ಮಾಹಿತಿ ಪ್ರಕಾರ, ಬೆಂದೂರು ಸಂತ ಸೆಬಾಸ್ಟಿಯನ್ ಚರ್ಚ್ ಪಾದ್ರಿ ಅವರು ಬೆಳಿಗ್ಗೆ 6.30 ಕ್ಕೆ ಚರ್ಚ್ ನಲ್ಲಿ ಸಾಮೂಹಿಕ ಪ್ರಾಥನೆಗೆ ತೆರಳಬೇಕಿತ್ತು.

ಹೀಗಾಗಿ ಅವಸರದಲ್ಲಿ ಹೊರಟ ಅವರು ಕಚೇರಿಯ ಬಾಗಿಲಿಗೆ ಬೀಗ ಹಾಕಲು ಮರೆತಿದ್ದರು. ಇದೇ ವೇಳೆ ಕಚೇರಿಗೆ ನುಗ್ಗಿದ ಅಪರಿಚಿತ ವ್ಯಕ್ತಿ 4.98 ಲಕ್ಷ ರೂ. ಕದ್ದು ಪರಾರಿಯಾಗಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಕದ್ರಿ ಪೊಲೀಸರು ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.